ADVERTISEMENT

Video | ಜಪಾನ್‌: ಬೆಂಕಿ ಹೊತ್ತಿಕೊಂಡ ವಿಮಾನದಿಂದ ಪ್ರಯಾಣಿಕರು ಪಾರಾಗಿದ್ದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2024, 14:43 IST
Last Updated 2 ಜನವರಿ 2024, 14:43 IST
<div class="paragraphs"><p>ಬೆಂಕಿ ಹೊತ್ತಿಕೊಂಡ ವಿಮಾನದಿಂದ ಹೊರಬರುತ್ತಿರುವ ಪ್ರಯಾಣಿಕರು (ವಿಡಿಯೊದಲ್ಲಿನ ದೃಶ್ಯ)</p></div>

ಬೆಂಕಿ ಹೊತ್ತಿಕೊಂಡ ವಿಮಾನದಿಂದ ಹೊರಬರುತ್ತಿರುವ ಪ್ರಯಾಣಿಕರು (ವಿಡಿಯೊದಲ್ಲಿನ ದೃಶ್ಯ)

   

ಟೊಕಿಯೊ: ಜಪಾನ್ ರಾಜಧಾನಿ ಟೊಕಿಯೊದ ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇನಲ್ಲಿ ಜಪಾನ್ ಏರ್‌ಲೈನ್‌ ವಿಮಾನವೊಂದು ಇನ್ನೊಂದು ವಿಮಾನಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ದುರಂತದಲ್ಲಿ ಡಿಕ್ಕಿಹೊಡೆದ ವಿಮಾನದಲ್ಲಿದ್ದ 379 ಜನರು ಸುರಕ್ಷಿತವಾಗಿದ್ದಾರೆ.

ಬೆಂಕಿ ಹೊತ್ತಿಕೊಂಡ ವಿಮಾನದಿಂದ ಪ್ರಯಾಣಿಕರು ಹೊರಬರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ADVERTISEMENT

ಗ್ಲೋಬಲ್ ಏವಿಯೇಷನ್ ​​ಸೇಫ್ಟಿ ವೆಬ್‌ಸೈಟ್ JACDED, ತುರ್ತು ನಿರ್ಗಮದ ದ್ವಾರದಿಂದ ಪ್ರಯಾಣಿಕರು ಕೆಳಗೆ ಜಾರುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದೆ. ಪ್ರಯಾಣಿಕರು ಕೆಳಗೆ ಜಾರುತ್ತಿರುವ ವೇಳೆ ಒಂದು ಎಂಜಿನ್ ಇನ್ನೂ ಚಾಲನೆಯಲ್ಲಿರುವುದನ್ನು ಕಾಣಬಹುದು.

ದುರಂತವೆಂದರೆ ಜಪಾನ್‌ ಏರ್‌ಲೈನ್‌ನ ಏರ್‌ಬಸ್ ಎ350 ವಿಮಾನ ಡಿಕ್ಕಿ ಹೊಡೆದ ತಕ್ಷಣವೇ ಕೋಸ್ಟ್‌ಗಾರ್ಡ್ ಬೆಂಕಿ ಹೊತ್ತಿಕೊಂಡಿದ್ದರಿಂದ ಅದರಲ್ಲಿದ್ದ ಐವರು ಸಿಬ್ಬಂದಿ ಸ್ಥಳದಲ್ಲೇ ಮೃತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.