ADVERTISEMENT

ರಷ್ಯಾ ಬಾಂಬ್ ದಾಳಿಯ ನಡುವೆಯೂ ನಗುತ್ತಿದ್ದೇವೆ: ಉಕ್ರೇನ್‌ ನಟನ ಮಾರ್ಮಿಕ ಸಂದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2022, 9:12 IST
Last Updated 13 ಮಾರ್ಚ್ 2022, 9:12 IST
ಉಕ್ರೇನ್‌ ನಟ ಪಾಶಾ ಲೀ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಚಿತ್ರ
ಉಕ್ರೇನ್‌ ನಟ ಪಾಶಾ ಲೀ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಚಿತ್ರ   

ಕೀವ್: ‘ರಷ್ಯಾ ಬಾಂಬ್ ದಾಳಿಯ ನಡುವೆಯೂ ನಾವು ನಗುತ್ತಿದ್ದೇವೆ. ಯಾಕೆಂದರೆ ನಾವದನ್ನು ಎದುರಿಸುತ್ತೇವೆ’. ಇದು ಉಕ್ರೇನ್‌ ನಟ ಪಾಶಾ ಲೀ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಸಂದೇಶ. ಜತೆಗೆ ತಾವು ನಸುನಗುತ್ತಾ ಕುಳಿತಿರುವ ಚಿತ್ರವೊಂದನ್ನೂ ಅವರು ಹಂಚಿಕೊಂಡಿದ್ದಾರೆ.

ಆದರೆ, ಈ ಸಂದೇಶ ಪ್ರಕಟಿಸಿದ ಕೆಲವೇ ತಾಸುಗಳಲ್ಲಿ ಅವರು ರಷ್ಯಾ ಪಡೆಗಳ ದಾಳಿಯಲ್ಲಿ ಹತರಾಗಿದ್ದಾರೆ.

ರಷ್ಯಾ ನಡೆಸುತ್ತಿರುವ ದಾಳಿಯಿಂದ ದೇಶವನ್ನು ರಕ್ಷಿಸಿಕೊಳ್ಳುವುದಕ್ಕಾಗಿ 33 ವರ್ಷ ವಯಸ್ಸಿನ ಪಾಶಾ ಲೀ ಅವರು ಕಳೆದ ತಿಂಗಳು ಉಕ್ರೇನ್ ಸಶಸ್ತ್ರ ಪಡೆಗಳಿಗೆ ಸೇರಿದ್ದರು. ಹೋರಾಟದ ಮಧ್ಯೆ ಸಿಕ್ಕ ಬಿಡುವಿನಲ್ಲಿ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಅವರು, ‘ಕಳೆದ 48 ಗಂಟೆಗಳಲ್ಲಿ ಒಂದೆಡೆ ಕುಳಿತು ಹೇಗೆ ನಮ್ಮ ಮೇಲೆ ಬಾಂಬ್ ದಾಳಿ ನಡೆಯುತ್ತಿದೆ ಎಂಬುದರ ಫೋಟೊ ತೆಗೆಯುವಷ್ಟು ಬಿಡುವು ಸಿಕ್ಕಿತು. ಆದಾಗ್ಯೂ ನಾವು ನಗಾಡುತ್ತಿದ್ದೇವೆ ಯಾಕೆಂದರೆ ನಾವಿದನ್ನು ನಿಭಾಯಿಸುತ್ತೇವೆ’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ಇರ್ಪಿನ್‌ನಲ್ಲಿ ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.