ADVERTISEMENT

ಸ್ಕಾಟ್‌ಲೆಂಡ್‌ : ಮೃತ ತಿಮಿಂಗಿಲ ಉದರದೊಳಗೆ 100 ಕೆ.ಜಿ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 12:24 IST
Last Updated 4 ಡಿಸೆಂಬರ್ 2019, 12:24 IST
photo courtesy: Scottish Marine Animal Strandings Scheme
photo courtesy: Scottish Marine Animal Strandings Scheme   

ಸ್ಕಾಟ್‌ಲೆಂಡ್‌ : ಇಲ್ಲಿನ ಕಡಲತೀರದಲ್ಲಿ ಸತ್ತು ಬಿದ್ದಿದ್ದ ತಿಮಿಂಗಿಲದ ಉದರದಲ್ಲಿ ಸುಮಾರು 100 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ ಪತ್ತೆಯಾಗಿವೆ.

ಸ್ಕಾಟ್‌ಲೆಂಡ್‌ನ ಇಸ್‌ಲೆ ಅಫ್‌ ಹ್ಯಾರಿಸ್‌ನಲ್ಲಿ20 ಟನ್‌ ಗಾತ್ರದತಿಮಿಂಗಿಲಮೃತಪಟ್ಟಿದ್ದು ಅದರಹೊಟ್ಟೆಯಲ್ಲಿ ಪ್ಲಾಸ್ಟಿಕ್ ಲೊಟ, ಹಗ್ಗದ ಕಟ್ಟು ಗಳು, ಮೀನು ಹಿಡಿಯುವ ಬಲೆ, ಹೀಗೆ ಸುಮಾರು 100 ಕೆ.ಜಿತ್ಯಾಜ್ಯ ವಸ್ತುಗಳು ದೊರೆತಿದೆ.ಸಮುದ್ರ ಮಾಲಿನ್ಯದಿಂದಾಗಿ ತಿಮಿಂಗಿಲದ ಸಾವುಸಂಭವಿಸಿದೆ ಎಂದು ಸ್ಥಳೀಯರು ಭಾವಿಸಿರುದಾಗಿಬಿಬಿಸಿವರದಿ ಮಾಡಿದೆ.

ಮೃತ ತಿಮಿಂಗಿಲದಹೊಟ್ಟೆಯೊಳಗೆದೊರೆತಅವಶೇಷಗಳನ್ನು ಕಂಡು ಬೇಸರವಾಗಿದೆ ಎಂದುಸ್ಥಳೀಯ ಡ್ಯಾನ್ ಪೆರ್‍ರೆಬಿಬಿಸಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

ತಿಮಿಂಗಿಲ ಮತ್ತು ಡಾಲ್ಫಿನ್‌ಗಳ ಬಗ್ಗೆ ಅಧ್ಯಯನನಡೆಸುವ ಸ್ಕಾಟಿಷ್‌ ಮರೇನ್‌ ಎನಿಮಲ್‌ ಸ್ಕೀಮ್‌(ಸಿಎಂಎಎಸ್‌ಎಸ್‌) ಸಂಘಟನೆಯು ಮೃತ ತಿಮಿಂಗಿದ ಚಿತ್ರವನ್ನು ತನ್ನ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದುಮೃತ ತಿಮಿಂಗಿಲದ ಹೊಟ್ಟೆಯೊಳಗೆ100 ಕೆಜಿ ಸಮುದ್ರದ ತ್ಯಾಜ್ಯವಸ್ತುಗಳಿದ್ದವುಎಂದು ಹೇಳಿದೆ.

ತಿಮಿಂಗಿಲ ಮೀನಿನ ಹೊಟ್ಟೆಯಲ್ಲಿ ದೊರೆತಿರುವ ಪ್ಲಾಸ್ಟಿಕ್‌ ಸಂಗ್ರಹ ಭಯಾನಕವಾಗಿವೆ, ಇದರಿಂದಾಗಿಮೀನಿನಜೀರ್ಣಕ್ರಿಯೆಯಲ್ಲಿ ಸಮಸ್ಯೆಯಾಗಿಸಾವು ಸಂಭವಿಸಿರಬಹುದು ಎಂದುಸಿಎಂಎಎಸ್‌ಎಸ್‌ ಸಂಘಟನೆಯು ಫೇಸ್‌ಬುಕ್‌ನಲ್ಲಿ ಬರೆದಿದೆ.

2009ರಲ್ಲಿ ತಿಮಿಂಗಿಲಗಳ ಸಂಖ್ಯೆ 204 ಇದ್ದು 2019ರಲ್ಲಿ 938ಕ್ಕೆ ಏರಿಕೆ ಕಂಡಿದೆ ಎಂದುಸಿಎಂಎಎಸ್‌ಎಸ್‌ ಸಂಸ್ಥೆಯ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.