ADVERTISEMENT

ಕೋವಿಡ್‌ ಮೂಲ ಪತ್ತೆ ತನಿಖೆಗೆ ಚೀನಾದ ಸಹಕಾರ ಅಗತ್ಯ: ಡಬ್ಲ್ಯೂಎಚ್‌ಒ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 7:53 IST
Last Updated 13 ಜೂನ್ 2021, 7:53 IST
ಡಬ್ಲ್ಯೂಎಚ್‌ಒ ಮುಖ್ಯಸ್ಥ ಟೆಡ್ರೋಸ್ ಗೆಬ್ರೆಯೆಸಸ್
ಡಬ್ಲ್ಯೂಎಚ್‌ಒ ಮುಖ್ಯಸ್ಥ ಟೆಡ್ರೋಸ್ ಗೆಬ್ರೆಯೆಸಸ್    

ವಾಷಿಂಗ್ಟನ್: ಕೊರೊನಾವೈರಸ್‌ನ ಮೂಲ ಪತ್ತೆಗಾಗಿ ನಡೆಯುತ್ತಿರುವ ತನಿಖೆಗೆ ಚೀನಾಸಹಕರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಗೆಬ್ರೆಯೆಸಸ್ ಹೇಳಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 'ಜಿ7' (ಗ್ರೂಪ್‌ ಆಫ್‌ ಸೆವೆನ್‌) ಸಮ್ಮೇಳನದ ವೇಳೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಅವರು ಶನಿವಾರ ಮಾತನಾಡಿದ್ದಾರೆ ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ. ವೈರಸ್‌ ಮೂಲ ಪತ್ತೆ ತನಿಖೆಯ ಮುಂದಿನ ಹಂತದ ವೇಳೆ ಚೀನಾದಿಂದ ಉತ್ತಮ ಸಹಕಾರ ಮತ್ತು ಪಾರದರ್ಶಕತೆಯನ್ನು ನಿರೀಕ್ಷಿಸಿರುವುದಾಗಿ ಟೆಡ್ರೋಸ್ ತಿಳಿಸಿದ್ದಾರೆ.

ತನಿಖೆಯ ಮುಂದಿನ ಹಂತಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದ ಅವರು ಇದೇ ವಿಚಾರವಾಗಿ ಜಿ7 ನಾಯಕರ ಜೊತೆ ಚರ್ಚಿಸಿದರು. ʼನಿಮಗೇ ತಿಳಿದಿರುವಂತೆ ನಮಗೆ ಚೀನಾ ಕಡೆಯಿಂದ ಸಹಕಾರದ ಅಗತ್ಯವಿದೆ. ವೈರಸ್‌ನ ಮೂಲವನ್ನು ಅರ್ಥಮಾಡಿಕೊಳ್ಳಲು ಇಲ್ಲವೇ ಪತ್ತೆ ಹಚ್ಚಲು ಅಥವಾ ಕಂಡುಹಿಡಿಯಲು ಪಾರದರ್ಶಕತೆ ಬೇಕುʼ ಎಂದಿದ್ದಾರೆ.

ADVERTISEMENT

ಈ ವಾರದ ಆರಂಭದಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್‌, ಡಬ್ಲ್ಯೂಎಚ್‌ಒದ ʼಸಮಯೋಚಿತ, ಪಾರದರ್ಶಕ ಮತ್ತುಸಾಕ್ಷ್ಯಾಧಾರ ಸಹಿತಸ್ವತಂತ್ರ ತನಿಖೆ ಪ್ರಕ್ರಿಯೆʼಗೆ ಸಂಪೂರ್ಣ ಬೆಂಬಲ ನೀಡುವುದಾಗಿಘೋಷಿಸಿದ್ದವು.

ಕೊರೊನಾವೈರಸ್‌ ಸೋಂಕು ಪ್ರಕರಣ 2019ರ ಅಂತ್ಯದ ವೇಳೆ ಮೊದಲ ಬಾರಿಗೆ ಚೀನಾದಲ್ಲಿ ಪತ್ತೆಯಾಗಿತ್ತು.ಈ ವೈರಾಣುವಿನ ಮೂಲ ಪತ್ತೆಗಾಗಿ ತನಿಖೆ ನಡೆಸಲು ಮತ್ತಷ್ಟು ಪ್ರಯತ್ನ ಮಾಡಬೇಕು ಎಂದು ಅಧ್ಯಕ್ಷ ಜೋ ಬೈಡನ್‌ ಅವರು ಅಮೆರಿಕದ ಗುಪ್ತಚರ ಇಲಾಖೆಗೆ ಇತ್ತೀಚೆಗೆಹೇಳಿದ್ದರು.

ಇದೀಗ ಹಲವು ವಿಜ್ಞಾನಿಕಗಳು ಮತ್ತು ಜಾಗತಿಕ ನಾಯಕರು, ವೈರಸ್‌ ನೈಸರ್ಗಿಕವಾದುದ್ದೇ ಅಥವಾ ವುಹಾನ್‌ ಪ್ರಯೋಗಾಲಯದಿಂದ ಸೋರಿಕೆಯಾದುದೇ ಎಂಬುದರ ಬಗ್ಗೆತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.