ADVERTISEMENT

ಫೈಜರ್–ಬಯೋಎನ್‌ಟೆಕ್ ಲಸಿಕೆ ತುರ್ತು ಬಳಕೆಗೆ ಡಬ್ಲ್ಯೂಎಚ್‌ಒ ಅನುಮತಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 2:03 IST
Last Updated 1 ಜನವರಿ 2021, 2:03 IST
   

ಜಿನೆವಾ (ಸ್ವಿಟ್ಜರ್‌ಲ್ಯಾಂಡ್‌): ಔಷಧ ತಯಾರಿಕಾ ಸಂಸ್ಥೆಫೈಜರ್ ಮತ್ತು ಬಯೋಎನ್‌ಟೆಕ್‌ನ ಕೋವಿಡ್‌–19 ಲಸಿಕೆಯನ್ನು ತ್ವರಿತವಾಗಿ ಬೇರೆಬೇರೆ ದೇಶಗಳಲ್ಲಿ ವಿತರಣೆ ಮಾಡಲು ಅನುಕೂಲವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್‌ಒ) ಗುರುವಾರ ತುರ್ತು ಬಳಕೆಗೆ ಅನುಮತಿ ನೀಡಿದೆ.

ಚೀನಾದಲ್ಲಿ ಕೊರೊನಾವೈರಸ್‌ ಸೋಂಕು ಕಾಣಿಸಿಕೊಂಡ ಬಳಿಕ, ಡಬ್ಲ್ಯೂಎಚ್‌ಒನಿಂದ ‘ತುರ್ತು ಬಳಕೆಗೆ ಅನುಮತಿ’ ಪಡೆದುಕೊಂಡ ಮೊದಲ ಲಸಿಕೆ‌ ಇದಾಗಿದೆ.

ಇಂಗ್ಲೆಂಡ್‌, ಅಮೆರಿಕ, ಕೆನಡಾ ಸೇರಿದಂತೆ ಯುರೋಪ್‌ ದೇಶಗಳಲ್ಲಿ ಡಿಸೆಂಬರ್‌ 8ರಿಂದಲೇ ಈ ಲಸಿಕೆ ಬಳಕೆಗೆ ಚಾಲನೆ ನೀಡಲಾಗಿದೆ.

ADVERTISEMENT

‘ಕೋವಿಡ್–19 ಲಸಿಕೆಗಳಿಗೆ ಜಾಗತಿಕ ಬಳಕೆಗೆ ಅನುಮತಿ ನೀಡುವ ನಿಟ್ಟಿನಲ್ಲಿ ಇದು ಅತ್ಯಂತ ಸಕಾರಾತ್ಮಕ ಹೆಜ್ಜೆಯಾಗಿದೆ’ ಎಂದು ಡಬ್ಲ್ಯೂಎಚ್‌ಒನ ಉನ್ನತ ಅಧಿಕಾರಿ ಮರಿಯಾಂಜೆಲಾ ಸಿಮಾವೊ ಹೇಳಿಕೆ ನೀಡಿದ್ದಾರೆ.

ತನ್ನ ತುರ್ತು ಬಳಕೆಯ ಪಟ್ಟಿಯು ವಿವಿಧ ದೇಶಗಳಲ್ಲಿನ ಔಷಧ ನಿಯಂತ್ರಕರಿಗೆ ಲಸಿಕೆ ಆಮದು ಮತ್ತು ವಿತರಣೆಗೆ ಅನುಮೋದನೆ ನೀಡಲು ದಾರಿ ಮಾಡಿಕೊಡುತ್ತದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.