ADVERTISEMENT

ಓಮೈಕ್ರಾನ್ ಸೋಂಕು ಮೂಗು, ಗಂಟಲಿಗೆ ಹಾನಿ ಮಾಡಬಹುದು: ವಿಶ್ವ ಆರೋಗ್ಯ ಸಂಸ್ಥೆ

ರಾಯಿಟರ್ಸ್
Published 4 ಜನವರಿ 2022, 12:54 IST
Last Updated 4 ಜನವರಿ 2022, 12:54 IST
   

ನವದೆಹಲಿ: ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ರೂಪಾಂತರ ತಳಿ ಓಮೈಕ್ರಾನ್, ಉಸಿರಾಟ ವ್ಯವಸ್ಥೆಯ ಮೇಲ್ಭಾಗದ ಅಂಗಗಳಿಗೆ ಹಾನಿ ಮಾಡುತ್ತದೆ ಎಂಬ ಬಗ್ಗೆ ಮತ್ತಷ್ಟು ಪುರಾವೆಗಳು ಲಭ್ಯವಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಅಂದರೆ, ಗಂಟಲು, ಮೂಗಿನ ಭಾಗದಲ್ಲಿ ಹಾನಿ ಮಾಡಬಹುದು ಎನ್ನಲಾಗಿದೆ.


ಆದರೆ, ಈ ಹಿಂದಿನ ತಳಿಗಳಿಗೆ ಹೋಲಿಸಿದರೆ ರೋಗ ಲಕ್ಷಣ ಕಡಿಮೆ ಇರುತ್ತದೆ ಎಂದು ಡಬ್ಲ್ಯುಎಚ್‌ಒ ಅಧಿಕಾರಿ ಹೇಳಿದ್ದಾರೆ.

ಓಮೈಕ್ರಾನ್ ಹರಡುವಿಕೆ ತಡೆಗೆ ನಿರ್ದಿಷ್ಟ ಲಸಿಕೆಯ ಅಗತ್ಯವಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿಶ್ವ ಆರೋಗ್ಯ ಸಂಸ್ಥೆಯ ವ್ಯವಸ್ಥಾಪಕ ಅಬ್ದಿ ಮಹಮೂದ್, ಆ ಬಗ್ಗೆ ಹೇಳುವುದಕ್ಕೆ ಈ ಸಮಯ ಸೂಕ್ತವಾದುದಲ್ಲ ಎನಿಸುತ್ತದೆ. ಈ ನಿರ್ಧಾರಕ್ಕೆ ಜಾಗತಿಕ ಸಮನ್ವಯತೆಯ ಅಗತ್ಯವಿದೆ. ವಾಣಿಜ್ಯ ವಲಯವು ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಬಿಡಬಾರದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT