ADVERTISEMENT

ಶೀಘ್ರದಲ್ಲೇ ತಾಲಿಬಾನ್‌ ನಾಯಕರ ಭೇಟಿ: ಡೊನಾಲ್ಡ್‌ ಟ್ರಂಪ್‌

ಪಿಟಿಐ
Published 1 ಮಾರ್ಚ್ 2020, 19:58 IST
Last Updated 1 ಮಾರ್ಚ್ 2020, 19:58 IST
   

ವಾಷಿಂಗ್ಟನ್‌: ಅಮೆರಿಕ ಹಾಗೂ ತಾಲಿಬಾನ್‌ ನಡುವಿನ ಶಾಂತಿ ಒಪ್ಪಂದದ ಬೆನ್ನಲ್ಲೇ ತಾಲಿಬಾನ್‌ ನಾಯಕರನ್ನು ಭೇಟಿಯಾಗಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧರಿಸಿದ್ದಾರೆ.

‘ತಾಲಿಬಾನ್‌ ನಾಯಕರನ್ನು ಶೀಘ್ರದಲ್ಲೇ ವೈಯಕ್ತಿಕವಾಗಿ ಭೇಟಿಯಾಗಲಿದ್ದೇನೆ. ಭಯೋತ್ಪಾದಕರನ್ನು ಇನ್ನು ಮುಂದೆ ಅವರೇ ಕೊಲ್ಲಲಿದ್ದಾರೆ. ಅಲ್ಲಿ ಹೋರಾಟವನ್ನು ಅವರೇ ಮುಂದುವರಿಸಲಿದ್ದಾರೆ.ಅಫ್ಗಾನಿಸ್ತಾನದಲ್ಲಿಭಯೋತ್ಪಾದಕರನ್ನು ಮಟ್ಟಹಾಕುವ ಕಾರ್ಯಾಚರಣೆಯಲ್ಲಿ ಅಮೆರಿಕ ಯಶಸ್ಸು ಸಾಧಿಸಿದೆ. ಇದೀಗ ನಮ್ಮ ಸೇನೆಯನ್ನು ಮನೆಗೆ ಕರೆತರುವ ಸಮಯ ಬಂದಿದೆ’ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್‌ ಹೇಳಿದರು.

‘ಸಿರಿಯಾ ಮತ್ತು ಇರಾಕ್‌ನಲ್ಲಿ ಶೇ 100 ಐಎಸ್‌ಐಎಸ್‌ ಅಧಿಕಾರವನ್ನು ನಾಶ ಮಾಡಿದ್ದೇವೆ. ಸಾವಿರಾರು ಐಎಸ್‌ಐಎಸ್‌ ಉಗ್ರರನ್ನು ಸಾಯಿಸಿದ್ದೇವೆ. ಅಫ್ಗಾನಿಸ್ತಾನದ ಸುತ್ತಲಿನ ಹಲವು ರಾಷ್ಟ್ರಗಳಿಗೆ, ನಾವು 8 ಸಾವಿರ ಮೈಲುಗಳಷ್ಟು ದೂರದಲ್ಲಿದ್ದೇವೆ.ಈ ಹೋರಾಟವನ್ನು ಬೇರೆ ಯಾರಾದರೂ ಮುಂದುವರಿಸುವ ಕಾಲ ಸನ್ನಿಹಿತವಾಗಿದೆ’ ಎಂದರು.

ADVERTISEMENT

ಶನಿವಾರ ದೋಹಾದಲ್ಲಿ ಶಾಂತಿ ಒಪ್ಪಂದಕ್ಕೆ ಅಮೆರಿಕ ಹಾಗೂ ತಾಲಿಬಾನ್‌ ಸಹಿ ಹಾಕಿತ್ತು. ಒಪ್ಪಂದದಂತೆ ಮುಂದಿನ 14 ತಿಂಗಳಲ್ಲಿ ತನ್ನೆಲ್ಲ ಸೇನಾ ಸಿಬ್ಬಂದಿಯನ್ನು ಅಮೆರಿಕ ವಾಪಾಸ್‌ ಕರೆಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.