ADVERTISEMENT

ಅಫ್ಗಾನಿಸ್ತಾನದಲ್ಲಿ ತಿಂಗಳಾಂತ್ಯಕ್ಕೆ ಆಹಾರದ ಸಮಸ್ಯೆ: ವಿಶ್ವಸಂಸ್ಥೆ ಆತಂಕ

ಪಿಟಿಐ
Published 2 ಸೆಪ್ಟೆಂಬರ್ 2021, 5:50 IST
Last Updated 2 ಸೆಪ್ಟೆಂಬರ್ 2021, 5:50 IST
ತಾಲಿಬಾನ್‌ ಮತ್ತು ಅಫ್ಗಾನಿಸ್ತಾನದ ಸೇನೆಯ ಯುದ್ಧದಿಂದಾಗಿ ನಿರಾಶ್ರಿತರಾದವರಿಗೆ ಕಾಬೂಲ್‌ನಲ್ಲಿ ಸಂಘ ಸಂಸ್ಥೆಗಳು ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿರುವುದು (ಎಎಫ್‌ಪಿ ಚಿತ್ರ)
ತಾಲಿಬಾನ್‌ ಮತ್ತು ಅಫ್ಗಾನಿಸ್ತಾನದ ಸೇನೆಯ ಯುದ್ಧದಿಂದಾಗಿ ನಿರಾಶ್ರಿತರಾದವರಿಗೆ ಕಾಬೂಲ್‌ನಲ್ಲಿ ಸಂಘ ಸಂಸ್ಥೆಗಳು ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿರುವುದು (ಎಎಫ್‌ಪಿ ಚಿತ್ರ)   

ವಿಶ್ವಸಂಸ್ಥೆ: ಸಂಘರ್ಷ ಪೀಡಿತ ಅಫ್ಗಾನಿಸ್ತಾನದಲ್ಲಿ ವಿಶ್ವಸಂಸ್ಥೆ ಸಂಗ್ರಹ ಮಾಡಿರುವ ಆಹಾರ ಈ ತಿಂಗಳಾಂತ್ಯಕ್ಕೆ ಮುಗಿಯಲಿದ್ದು, ಆಹಾರ ಸಮಸ್ಯೆ ತಲೆದೋರಲಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದ ವಿಶೇಷ ಪ್ರತಿನಿಧಿ ರಮೀಜ್‌ ಅಲಕ್‌ಬರೋವ್‌ ಈ ಎಚ್ಚರಿಕೆ ನೀಡಿದ್ದು, ಸಂಕಷ್ಟಕ್ಕೆ ಸಿಲುಕಿರುವ ಪ್ರಜೆಗಳಿಗೆ ಆಹಾರ ಪೂರೈಸಲು ₹ 1,461 ಕೋಟಿ ಅಗತ್ಯವಿದೆ ಎಂದು ಹೇಳಿದ್ದಾರೆ.

‘ಆಹಾರದ ಕೊರತೆ ಎಷ್ಟಿದೆ ಎಂದರೆ, ದೇಶದ ಜನಸಂಖ್ಯೆಯ ಮೂರನೇ ಒಂದರಷ್ಟು ಜನರಿಗೆ ಒಂದು ಹೊತ್ತಿನ ಊಟ ಸಿಗುತ್ತದೆಯೋ ಇಲ್ಲವೋ ಎಂಬ ಖಾತರಿ ಇಲ್ಲದಂತಾಗಿದೆ’ ಎಂದು ಅವರು ಕಾಬೂಲ್‌ನಲ್ಲಿ ನಡೆಸಿದ ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮಕ್ಕಳು ಹೆಚ್ಚು ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಐದು ವರ್ಷದೊಳಗಿನ ಮಕ್ಕಳು ವಿಪರೀತ ಅಪೌಷ್ಟಿಕತೆಯಂದ ಬಳಲುತ್ತಿದ್ದು, ಆಹಾರದ ದಾಸ್ತಾನು ಕೊನೆಗೊಂಡರೆ ಈ ಮಕ್ಕಳಿಗೆ ಮತ್ತಷ್ಟು ತೊಂದರೆಯಾಗಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.