ADVERTISEMENT

ಅಮೆರಿಕದಲ್ಲಿ ಶೀತ ಗಾಳಿ ತೀವ್ರ: ಸುಮಾರು 6 ಕೋಟಿ ಜನರಿಗೆ ಸಂಕಷ್ಟ 

ರಾಯಿಟರ್ಸ್
Published 6 ಜನವರಿ 2025, 6:32 IST
Last Updated 6 ಜನವರಿ 2025, 6:32 IST
<div class="paragraphs"><p>ಕೆಂಟುಕಿ ನಗರದಲ್ಲಿ ಹಿಮದಿಂದ ಆವೃತವಾದ ರಸ್ತೆ</p></div>

ಕೆಂಟುಕಿ ನಗರದಲ್ಲಿ ಹಿಮದಿಂದ ಆವೃತವಾದ ರಸ್ತೆ

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್‌: ಪೂರ್ವ ಮತ್ತು ಮಧ್ಯ ಅಮೆರಿಕದ ಭಾಗಗಳಲ್ಲಿ ಹಿಮಪಾತ, ಶೀತ ಗಾಳಿ ತೀವ್ರವಾಗಿದ್ದು, ಲಕ್ಷಾಂತರ ಅಮೆರಿಕನ್ನರು ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ADVERTISEMENT

ಕೆಂಟುಕಿ ಮತ್ತು ವರ್ಜೀನಿಯಾದಲ್ಲಿ ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ವಿಪರೀತ ಹಿಮ ಬೀಳುತ್ತಿರುವ ಕಾರಣ ವಿಮಾನ ಹಾರಾಟದಲ್ಲಿ ವ್ಯತ್ಯಯಗೊಂಡಿದೆ. ದೇಶದಾದ್ಯಂತ 2 ಸಾವಿರಕ್ಕೂ ಹೆಚ್ಚು ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, 25 ಸಾವಿರ ವಿಮಾನಗಳು ತಡವಾಗಿ ಹಾರಾಟ ನಡೆಸಿವೆ. ಅಲ್ಲದೆ, ರಸ್ತೆಗಳು ಹಿಮದಿಂದ ಆವೃತವಾಗಿದ್ದು, ವಾಹನಗಳ ಸಂಚಾರಕ್ಕೆ ಸಾಧ್ಯವಾಗದಂತಾಗಿದೆ.

ಚಳಿಗಾಲದ ಈ ಹವಾಮಾನ ಪರಿಸ್ಥಿತಿಯ ಕಾರಣ ಅಮೆರಿಕದ ಸುಮಾರು 6 ಕೋಟಿ (60 ಮಿಲಿಯನ್‌) ಜನರು ಸಂಕಷ್ಟದಲ್ಲಿದ್ದಾರೆ ಎಂದು ಹವಾಮಾನಶಾಸ್ತ್ರಜ್ಞ ರಿಚ್‌ ಬೆನ್‌ ತಿಳಿಸಿರುವುದಾಗಿ ವರದಿಯಾಗಿದೆ.

ವರ್ಜಿನಿಯಾ, ಪೆನ್ಸಿಲ್ವೆನಿಯಾ ಸೇರಿ ಹಲವು ರಾಜ್ಯಗಳಲ್ಲಿ 1 ಇಂಚಿನಿಂದ 1 ಅಡಿವರೆಗೆ ಹಿಮ ಆವೃತವಾಗಿದೆ. ಇದು ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.