ADVERTISEMENT

World covid-19 update: ಜಗತ್ತಿನಾದ್ಯಂತ 27 ಲಕ್ಷ ಸೋಂಕಿತರು ಗುಣಮುಖ

ಏಜೆನ್ಸೀಸ್
Published 3 ಜೂನ್ 2020, 2:38 IST
Last Updated 3 ಜೂನ್ 2020, 2:38 IST
   

ನ್ಯೂಯಾರ್ಕ್‌:ಜಗತ್ತಿನಾದ್ಯಂತ ಇದುವರೆಗೆ ಒಟ್ಟು 27 ಲಕ್ಷದ 73 ಸಾವಿರಕೋವಿಡ್‌–19 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಜಾನ್‌ ಹಾಪ್‌ಕಿನ್ಸ್‌ ವಿವಿಯ ಕೊರೊನಾ ಸಂಶೋದನಾ ಕೇಂದ್ರ ಮಾಹಿತಿ ನೀಡಿದೆ.

ಪ್ರಪಂಚದಾದ್ಯಂತ ಇದುವರೆಗೆ ಒಟ್ಟು 63,76,822 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಾವಿನ ಸಂಖ್ಯೆ3.80 ಲಕ್ಷಕ್ಕೆ ಏರಿಕೆಯಾಗಿದೆ.

ಅತಿ ಹೆಚ್ಚು(18,31,730) ಸೋಂಕು ಕಾಣಿಸಿಕೊಂಡಿರುವ ಅಮೆರಿಕದಲ್ಲಿ, ಇದುವರೆಗೆ ಒಟ್ಟು 1,06,180 ಜನರು ಮೃತಪಟ್ಟಿದ್ದಾರೆ.ಈ ದೇಶದ ನ್ಯೂಯಾರ್ಕ್ ಒಂದರಲ್ಲೇ ಒಟ್ಟು 3,71,711 ಪ್ರಕರಣಗಳು ವರದಿಯಾಗಿದ್ದು, 29,833 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಅಮೆರಿಕದ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾಗಿರುವ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ 5,55,383ಕ್ಕೆ ಏರಿಕೆಯಾಗಿದೆ. ರಷ್ಯಾದಲ್ಲಿ 4,23,186 ಲಕ್ಷ ಮೀರಿದೆ. ಈ ದೇಶಗಳಲ್ಲಿ ಕ್ರಮವಾಗಿ31,199 ಮತ್ತು5,031 ಜನರು ಮೃತಪಟ್ಟಿದ್ದಾರೆ.

ಇಂಗ್ಲೆಂಡ್‌ನಲ್ಲಿ 2,79,392 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 39,452 ಸೋಂಕಿತರು ಸಾವಿಗೀಡಾಗಿದ್ದಾರೆ.

ಕೊರೊನಾವೈರಸ್‌ಮೊದಲುಕಾಣಿಸಿಕೊಂಡ ಚೀನಾದಲ್ಲಿ ಈವರೆಗೆ 84,141 ಜನರಿಗೆ ಸೋಂಕು ತಗುಲಿದೆ. 4,638 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.