ADVERTISEMENT

ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟು ತಡೆಯಲು ತುರ್ತು ಕ್ರಮ ಅಗತ್ಯ: ಚೀನಾ

ಏಜೆನ್ಸೀಸ್
Published 20 ನವೆಂಬರ್ 2023, 6:20 IST
Last Updated 20 ನವೆಂಬರ್ 2023, 6:20 IST
ವಾಂಗ್‌ ಯಿ
ವಾಂಗ್‌ ಯಿ   

ಬೀಜಿಂಗ್‌ : ಗಾಜಾ ಪಟ್ಟಿಯಲ್ಲಿ ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟನ್ನು ತಡೆಯಲು ಅಂತರರಾಷ್ಟ್ರೀಯ ಸಮುದಾಯಗಳು ತುರ್ತಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಹೇಳಿದ್ದಾರೆ.

ಬೀಜಿಂಗ್‌ ನಡೆಯುತ್ತಿರುವ ವಿದೇಶಾಂಗ ಸಚಿವರ ಸಭೆಯಲ್ಲಿ ಪ್ಯಾಲೆಸ್ಟೀನ್‌ , ಇಂಡೋನೇಷ್ಯಾ, ಈಜಿಪ್ಟ್‌, ಸೌದಿ ಅರೇಬಿಯಾ ಹಾಗೂ ಜೋರ್ಡಾನ್‌ನ ವಿದೇಶಾಂಗ ಸಚಿವರು ಭಾಗವಹಿಸಿದ್ದರು. ಸಭೆಯಲ್ಲಿ ಪ್ಯಾಲೆಸ್ಟೀನ್‌–ಇಸ್ರೇಲ್‌ ನಡುವಿನ ಬಿಕ್ಕಟ್ಟಿನ ಕುರಿತು ಚರ್ಚೆಯಾಗಿದೆ.

‘ಹಿಂದಿನಿಂದಲೂ ಬೀಜಿಂಗ್ ಮುಸ್ಲಿಂ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಗಾಜಾದಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕಿದೆ. ಮಧ್ಯ ಪ್ರಾಚ್ಯದಲ್ಲಿ ಶಾಂತಿಯನ್ನು ಮರುಸ್ಥಾಪನೆ ಮಾಡಬೇಕಿದೆ’ ಎಂದು ವಾಂಗ್‌ ತಿಳಿಸಿದರು.

ADVERTISEMENT

‘ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ಹೆಚ್ಚುತ್ತಿದೆ. ಗಾಜಾದ ಈಗಿನ ಪರಿಸ್ಥಿತಿಯು ಎಲ್ಲ ದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಯಾರದ್ದು ಸರಿ, ಯಾರದ್ದು ತಪ್ಪು ಎನ್ನುವುದು ಮುಖ್ಯವಲ್ಲ. ಮಾನವೀಯತೆಯೊಂದೇ ಇಲ್ಲಿ ಮುಖ್ಯ’ ಎಂದರು.

‘ಗಾಜಾದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಅಂತರರಾಷ್ಟ್ರೀಯ ಸಮುದಾಯಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ. ಈ ಮಹಾ ಬಿಕ್ಕಟ್ಟು ಮುಂದುವರಿಯದಂತೆ ತಡೆಯಬೇಕಿದೆ’ ಎಂದು ಹೇಳಿದರು.

ಗಾಜಾದ ಮೇಲೆ ಇಸ್ರೇಲ್‌ ದಾಳಿಯನ್ನು ಬಲವಾಗಿ ಖಂಡಿಸಿರುವ ಚೀನಾ, ಕದನ ವಿರಾಮ ಘೋಷಿಸುವಂತೆ ಒತ್ತಾಯಿಸಿತ್ತು. ಬಿಕ್ಕಟ್ಟು ಪರಿಹರಿಸಲು ಎರಡು ರಾಜ್ಯ (ಟು ಸ್ಟೇಟ್‌) ಪರಿಕಲ್ಪನೆಯೊಂದೆ ಸಹಕಾರಿ ಎಂದು ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.