ADVERTISEMENT

ಹಮಾಸ್‌ ಉಗ್ರರಿಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ‘ಎಕ್ಸ್‌’ ಖಾತೆ ಡಿಲೀಟ್‌!

ರಾಯಿಟರ್ಸ್
Published 12 ಅಕ್ಟೋಬರ್ 2023, 13:40 IST
Last Updated 12 ಅಕ್ಟೋಬರ್ 2023, 13:40 IST
<div class="paragraphs"><p>ಎಕ್ಸ್‌ ಲೋಗೊ– ರಾಯಿಟರ್ಸ್‌ ಚಿತ್ರ</p></div>

ಎಕ್ಸ್‌ ಲೋಗೊ– ರಾಯಿಟರ್ಸ್‌ ಚಿತ್ರ

   

ವಾಷಿಂಗ್ಟನ್‌: ಇಸ್ರೇಲ್‌ –ಪ್ಯಾಲೆಸ್ಟೇನ್‌ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ದಾಳಿ–ಪ್ರತಿದಾಳಿಗೆ ಮಕ್ಕಳು, ಶಿಶುಗಳು ಸೇರಿ ಸಾವಿರಾರು ನಾಗರಿಕರ ಹತ್ಯೆಯಾಗುತ್ತಿದೆ. 

ಜಗತ್ತಿನ ವಿವಿಧ ದೇಶಗಳು ಹಮಾಸ್‌ ನಡೆಯನ್ನು ತೀವ್ರವಾಗಿ ಖಂಡಿಸಿವೆ. ಈ ನಡುವೆ ವಿಶ್ವದೆಲ್ಲೆಡೆ ಅಧಿಕೃತ ಸಾಮಾಜಿಕ ಮಾಧ್ಯಮ ಎಂದು ಗುರುತಿಸಿಕೊಂಡಿರುವ, ಎಲನ್‌ ಮಸ್ಕ್‌ ಒಡೆತನದ ಎಕ್ಸ್‌ (ಟ್ವಿಟರ್‌) ಹಮಾಸ್‌ ಉಗ್ರರಿಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಖಾತೆಗಳನ್ನು ತೆಗೆದುಹಾಕಿದೆ.

ADVERTISEMENT

ಈ ಕುರಿತು ಎಕ್ಸ್‌ ಸಿಇಒ ಲಿಂಡಾ ಯಾಕಾರಿನೊ, ಇಸ್ರೇಲ್ – ಹಮಾಸ್‌ ಉಗ್ರರ ನಡುವಿನ ಯುದ್ಧಕ್ಕೆ ಸಂಬಂಧಿಸಿ ಕಾನೂನುಬಾಹಿರ ವಿಷಯಗಳನ್ನು ಹಂಚಿಕೊಳ್ಳುವುದನ್ನು ತಡೆಯಲು ಖಾತೆಗಳನ್ನು ಅಳಿಸಲಾಗಿದೆ ಎಂದು ಹೇಳಿದ್ದಾರೆ.

ಯುರೋಪಿಯನ್‌ ಮಿಲಿಟರಿ ಉದ್ಯಮದ ಮುಖ್ಯಸ್ಥ ಥಿಯೆರಿ ಬ್ರೆಟನ್‌ ಅವರು, ಹಮಾಸ್‌ ಉಗ್ರರ ದಾಳಿಯ ಬಗ್ಗೆ ಎಕ್ಸ್‌ನಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಯನ್ನು ತಡೆಯಲು ಯುರೋಪಿಯನ್‌ ಕಂಟೆಂಟ್‌ ನಿಯಮವನ್ನು ಅನುಸರಿಸುವಂತೆ ಎಚ್ಚರಿಸಿದ ಬಳಿಕ ಈ ಕ್ರಮ ಜಾರಿಗೆ ಬಂದಿದೆ.

ಸಂಘರ್ಷ ಶುರುವಾದ ಬಳಿಕ, ಹಮಾಸ್‌ ಉಗ್ರರು ಒತ್ತೆಯಾಗಿರಿಸಿಕೊಂಡಿರುವ ಇಸ್ರೇಲ್‌ ನಾಗರಿಕರ ಚಿತ್ರಗಳು, ವಿಡಿಯೊಗಳು ಸೇರಿದಂತೆ ಸಾಕಷ್ಟು ಪೋಸ್ಟ್‌ಗಳು ಎಕ್ಸ್‌/ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. ಇವುಗಳ ನಡುವೆ ಸುಳ್ಳು ನಿರೂಪಣೆಯೊಂದಿಗೆ ಬೇರೆ ಸಂದರ್ಭದ ವಿಡಿಯೊಗಳು, ಚಿತ್ರಗಳನ್ನೂ ಹಂಚಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.