ADVERTISEMENT

ಸತತ ಮೂರನೇ ಬಾರಿಗೆ ಚೀನಾದ ಆಧ್ಯಕ್ಷರಾದ ಜಿನ್‌ಪಿಂಗ್‌

ಐಎಎನ್ಎಸ್
Published 23 ಅಕ್ಟೋಬರ್ 2022, 7:09 IST
Last Updated 23 ಅಕ್ಟೋಬರ್ 2022, 7:09 IST
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌    

ಬೀಜಿಂಗ್‌: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸತತ ಮೂರನೇ ಅವಧಿಗೆಅಧಿಕಾರದಲ್ಲಿ ಮುಂದುವರಿದಿದ್ದಾರೆ. ಈ ವಿಷಯವನ್ನು ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಲಾಯಿತು.

ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ(ಸಿಪಿಸಿ) 20ನೇ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಜಿನ್‌ಪಿಂಗ್‌ ಅವರನ್ನು ಸಮಿತಿಯ ಮೊದಲ ಸರ್ವಸದಸ್ಯ ಸಭೆಯಲ್ಲಿ ಚುನಾಯಿಸಲಾಯಿತು ಎಂದು ಸುದ್ದಿ ಸಂಸ್ಥೆ ‘ಕ್ಸಿನುಹಾ’ ಭಾನುವಾರ ವರದಿ ಮಾಡಿದೆ.

ಜಿನ್‌ಪಿಂಗ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ 20ನೇ ಸಿಪಿಸಿ ಕೇಂದ್ರ ಸಮಿತಿಯ 203 ಸದಸ್ಯರು ಮತ್ತು 168 ಪರ್ಯಾಯ ಸದಸ್ಯರು ಭಾಗವಹಿಸಿದ್ದರು.

ADVERTISEMENT

ಅಧಿವೇಶನದಲ್ಲಿ ಸಿಪಿಸಿ ಕೇಂದ್ರ ಮಿಲಿಟರಿ ಕಮಿಷನ್‌ನ ಅಧ್ಯಕ್ಷರನ್ನಾಗಿಯೂ ಜಿನ್‌ಪಿಂಗ್‌ ಅವರನ್ನು ಹೆಸರಿಸಲಾಯಿತು.

ತಮ್ಮ ಅಯ್ಕೆ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವ ಅಧ್ಯಕ್ಷ ಷಿ ಜಿನ್‌ಪಿಂಗ್‌, ‘ವಿಶ್ವವಿಲ್ಲದೇ ಚೀನಾ ಅಭಿವೃದ್ಧಿ ಹೊಂದಲಾರದು, ವಿಶ್ವಕ್ಕೆ ಚೀನಾ ಕೂಡ ಬೇಕು’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಷಿ ಜಿನ್‌ಪಿಂಗ್‌ ಅವರ ಹೊಸ ತಂಡದಲ್ಲಿ ಪಕ್ಷದ ಶಾಂಘೈ ಘಟಕದ ಮಾಜಿ ಅಧ್ಯಕ್ಷ ಲಿ ಕಿಯಾಂಗ್ ಅವರನ್ನು ಹೊಸ ಪ್ರಧಾನ ಮಂತ್ರಿಯನ್ನಾಗಿ ಮಾಡಲಾಗಿದೆ ಬಿಬಿಸಿ ವರದಿ ಮಾಡಿದೆ.

ತಮ್ಮ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ಜಿನ್‌ಪಿಂಗ್‌ ಸಿಪಿಸಿಗೆ ಧನ್ಯವಾದ ಅರ್ಪಿಸಿದ್ದಾರೆ. ದೇಶವು ‘ಸಮೃದ್ಧ ಸಮಾಜ’ ವನ್ನು ಸ್ಥಾಪಿಸುವ ಗುರಿಯನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.