ADVERTISEMENT

ಕಾಬೂಲ್‌ ಸ್ಫೋಟ: ಮಗುವೊಂದು ನನ್ನ ತೋಳಿನಲ್ಲೇ ಮೃತಪಟ್ಟಿತು ಎಂದ ಪ್ರತ್ಯಕ್ಷದರ್ಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2021, 13:30 IST
Last Updated 27 ಆಗಸ್ಟ್ 2021, 13:30 IST
ಬಾಂಬ್‌ ದಾಳಿ ವೇಳೆ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು (ಎಎಫ್‌ಪಿ ಚಿತ್ರ)
ಬಾಂಬ್‌ ದಾಳಿ ವೇಳೆ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು (ಎಎಫ್‌ಪಿ ಚಿತ್ರ)   

ಕಾಬೂಲ್:‌ ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದ ಆತ್ಮಾಹುತಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿಅಮೆರಿಕ ಸೇನೆಯ13 ಯೋಧರು ಸೇರಿದಂತೆ ಕನಿಷ್ಠ103 ಜನರು ಮೃತಪಟ್ಟಿದ್ದಾರೆ. ಇಷ್ಟಲ್ಲದೇ150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಹಮೀಜ್‌ ಕರ್ಜೈ ವಿಮಾನ ನಿಲ್ದಾಣದಲ್ಲಿಸ್ಫೋಟ ನಡೆದ ವೇಳೆ ತಮ್ಮ ಸುತ್ತಲೂಸಂಭವಿಸಿದ ಸಾವುಗಳ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದು, ಮಗುವೊಂದು ತಾವು ಎತ್ತಿಕೊಂಡಿದ್ದಾಗಲೇ ಮೃತಪಟ್ಟಿತು ಎಂದು ಕಣ್ಣೀರು ಹಾಕಿದ್ದಾರೆ.

ತಮ್ಮನ್ನು ಅಫ್ಗಾನ್‌ ನಿವಾಸಿ ಕಾರ್ಲ್‌ ಎಂದು ಹೇಳಿಕೊಂಡಿರುವ ಆ ವ್ಯಕ್ತಿ, ದೇಶದಿಂದ ಹೊರಹೋಗುವ ಸಲುವಾಗಿ ನಾನುವಿಮಾನ ನಿಲ್ದಾಣದ ಹೊರಗೆ ಸಾಲಿನಲ್ಲಿ ನಿಂತಿದ್ದೆ.ಅಮೆರಿಕನ್ನರು ಮತ್ತೊಂದು ಬದಿಯಲ್ಲಿ ನಿಂತಿದ್ದರು. ಜನರ ಬಳಿ ಇದ್ದ ಪಾಸ್‌ಪೋರ್ಟ್‌ ಮತ್ತು ಇತರ ವಸ್ತುಗಳ ತಪಾಸಣೆ ನಡೆಸಲಾಗುತ್ತಿತ್ತು. ವೀಸಾ ಇದ್ದವರಿಗೆ ವಿಮಾನದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿತ್ತು. ಈ ವೇಳೆ ಜನಸಂದಣಿ ನಡುವೆಯೇ ಸ್ಫೋಟ ಸಂಭವಿಸಿತುʼ ಎಂದು ವಿವರಿಸಿದ್ದಾರೆ.

ADVERTISEMENT

ʼಸ್ಫೋಟದಿಂದಾಗಿ ಗಾಯಗೊಂಡಿದ್ದ ಐದು ವರ್ಷದ ಹೆಣ್ಣು ಮಗುವೊಂದನ್ನು ಎತ್ತಿಕೊಂಡೆ. ಆದರೆ, ಆ ಮಗು ನನ್ನ ತೋಳುಗಳಲ್ಲಿದ್ದಾಗಲೇ ಪ್ರಾಣ ಬಿಟ್ಟಿತುʼ ಎಂದೂ ನೊಂದುಕೊಂಡಿದ್ದಾರೆ.

ಅಂದಹಾಗೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರ ಸಂಘಟನೆಯು ಈ ದಾಳಿಯ ಹೊಣೆ ಹೊತ್ತಿದೆ. ನಮ್ಮ ಸರ್ಕಾರ ಕಾಬೂಲ್‌ ದಾಳಿಕೋರರನ್ನು ಸದೆ ಬಡಿಯಲಿದೆ ಎಂದುಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಿಡಿ ಕಾರಿದ್ದಾರೆ.

ಐಎಸ್‌ ಸಂಘಟನೆಯು,ಕಳೆದ ಕೆಲವು ವರ್ಷಗಳಿಂದ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಮಸೀದಿಗಳು, ದೇಗುಲಗಳು, ಆಸ್ಪತ್ರೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿಸಾಕಷ್ಟು ದಾಳಿಗಳನ್ನು ಸಂಘಟಿಸಿದೆ.

ತಾಲಿಬಾನ್‌ ಉಗ್ರ ಸಂಘಟನೆಯು ಅಫ್ಗಾನಿಸ್ತಾನವನ್ನು ತನ್ನ ಹಿಡಿತಕ್ಕೆ ಪಡೆಯುತ್ತಿದ್ದಂತೆಅಲ್ಲಿನ ನಾಗರಿಕರು ಮತ್ತು ವಿದೇಶಿಗರು ಅಫ್ಗಾನ್‌ ತೊರೆಯಲು ವಿಮಾನ ನಿಲ್ದಾಣದತ್ತ ಜಮಾಯಿಸುತ್ತಿದ್ದಾರೆ.

ಐಎಸ್‌ ಮತ್ತು ತಾಲಿಬಾನ್‌ ಸಂಘಟನೆಗಳಲ್ಲಿರುವವರು ‌ಇಸ್ಲಾಂನ ʼಸುನ್ನಿʼ ಪಂಗಡಕ್ಕೇಸೇರಿದವರಾಗಿದ್ದರೂ, ಪರಸ್ಪರ ವಿರೋಧಿಗಳಾಗಿದ್ದಾರೆ.

ʼಇವರು (ಐಎಸ್‌ ಉಗ್ರರು) ತಾಲಿಬಾನಿಗಳಿಗಿಂತಲೂ ಹೆಚ್ಚು ಅಪಾಯಕಾರಿ ಮತ್ತು ಮೂಲತಃ ಅವರು ತಾಲಿಬಾನ್‌ ಜೊತೆಗೆ ಯುದ್ಧ ಮುಂದುವರಿಸಿಕೊಂಡು ಬಂದಿದ್ದಾರೆ. ಹಾಗಾಗಿ ಇದು ಅತ್ಯಂತ ಭಯಾನಕ ಸ್ಥಿತಿಯಾಗಿದೆʼ ಎಂದು ಆಸ್ಟ್ರೇಲಿಯಾ ರಕ್ಷಣಾ ಸಚಿವ ಪೀಟರ್‌ ದಟ್ಟೊನ್‌ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.