ADVERTISEMENT

ನಿಮ್ಮೊಂದಿಗೆ ನಾವಿದ್ದೇವೆ: ಝೆಲೆನ್‌ಸ್ಕಿಗೆ ಬ್ರಿಟನ್ ಪ್ರಧಾನಿ ಅಭಯ

ಏಜೆನ್ಸೀಸ್
Published 2 ಮಾರ್ಚ್ 2025, 5:46 IST
Last Updated 2 ಮಾರ್ಚ್ 2025, 5:46 IST
<div class="paragraphs"><p>ಝೆಲೆನ್‌ಸ್ಕಿ ಮತ್ತು ಕೀರ್‌ ಸ್ಟಾರ್ಮರ್</p></div>

ಝೆಲೆನ್‌ಸ್ಕಿ ಮತ್ತು ಕೀರ್‌ ಸ್ಟಾರ್ಮರ್

   

ರಾಯಿಟರ್ಸ್‌

ಲಂಡನ್‌: ಅಮೆರಿಕದ ಜೊತೆಗಿನ ದ್ವಿಪಕ್ಷೀಯ ಸಂಬಂಧ ಹಳಸಿದ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರಿಗೆ ಸಂಪೂರ್ಣ ಸಹಕಾರದ ಭರವಸೆಯನ್ನು ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್ ನೀಡಿದ್ದಾರೆ.

ADVERTISEMENT

ಶನಿವಾರ ಬ್ರಿಟನ್ ಪ್ರಧಾನಿ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್‌ಗೆ ಆಗಮಿಸಿದ ಝೆಲೆನ್‌ಸ್ಕಿ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡಿರುವ ಸ್ಟಾರ್ಮರ್, ಝೆಲೆನ್‌ಸ್ಕಿ ಅವರನ್ನು ತಬ್ಬಿಕೊಂಡು ಒಳಗೆ ಕರೆದೊಯ್ದಿದ್ದಾರೆ.

ನಂತರ ಸಭೆ ನಡೆಸಿದ ಉಭಯ ನಾಯಕರು ರಷ್ಯಾದ ಬೆದರಿಕೆ, ಯೂರೋಪಿಯನ್‌ ಒಕ್ಕೂಟದ ಸಹಕಾರ ಮುಂತಾದವುಗಳ ಬಗ್ಗೆ ಚರ್ಚಿಸಿದ್ದಾರೆ.

‘ಹೊರಗಡೆ ಉಕ್ರೇನ್‌ ಪರ ಜನರು ಘೋಷಣೆ ಕೂಗುತ್ತಿರುವುದನ್ನು ನೀವು ಕೇಳಿಸಿಕೊಂಡಿರಬಹುದು. ಬ್ರಿಟನ್‌ ಜನರು ಉಕ್ರೇನ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮೊಂದಿಗೆ ನಾವು ಇದ್ದೇವೆ’ ಎಂದು ಝೆಲೆನ್‌ಸ್ಕಿ ಅವರಿಗೆ ಸ್ಟಾರ್ಮರ್‌ ತಿಳಿಸಿದ್ದಾರೆ.

ಬ್ರಿಟನ್‌ ಜನರ ಬೆಂಬಲಕ್ಕೆ ಝೆಲೆನ್‌ಸ್ಕಿ ಧನ್ಯವಾದ ತಿಳಿಸಿದ್ದಾರೆ.

ಸಭೆಯ ನಂತರ ಶನಿವಾರ ಸಂಜೆ ಸ್ಟಾರ್ಮರ್ ಅವರು ಅಮೆರಿಕದ ಅಧ್ಯಕ್ಷ ಟ್ರಂಪ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.