ADVERTISEMENT

ಅಮೆರಿಕದಿಂದ ನಿರ್ಣಾಯಕ ಸೇನಾ ನೆರವು: ಝೆಲೆನ್‌ಸ್ಕಿ ಆಶಾವಾದ

ಏಜೆನ್ಸೀಸ್
Published 15 ಡಿಸೆಂಬರ್ 2023, 11:46 IST
Last Updated 15 ಡಿಸೆಂಬರ್ 2023, 11:46 IST
ವೊಲೊಡಿಮಿರ್‌ ಝೆಲೆನ್‌ಸ್ಕಿ
ವೊಲೊಡಿಮಿರ್‌ ಝೆಲೆನ್‌ಸ್ಕಿ   

ವಾಷಿಂಗ್ಟನ್‌: ‘ಯುದ್ಧದಲ್ಲಿ ರಷ್ಯಾವನ್ನು ಹಿಮ್ಮೆಟ್ಟಿಸಲು ಉಕ್ರೇನ್‌ಗೆ ಅಗತ್ಯವಿರುವ ಮಹತ್ವದ ಸೇನಾ ಬೆಂಬಲ ಮುಂದುವರಿಸಲು ಅಮೆರಿಕ ಸಂಸತ್ತು ಶೀಘ್ರವೇ ನಿರ್ಣಾಯಕವಾದ ನಿರ್ಧಾರ ತೆಗೆದುಕೊಳ್ಳುವುದಾಗಿ ನಾವು ನಿರೀಕ್ಷೆ ಮಾಡಿದ್ದೇವೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆಶಾವಾದ ವ್ಯಕ್ತಪಡಿಸಿದ್ದಾರೆ.

ಜರ್ಮನಿಯಲ್ಲಿರುವ ಅಮೆರಿಕದ ಸೇನಾ ನೆಲೆಯ ಪ್ರಧಾನ ಕಚೇರಿಗೆ ಗುರುವಾರ ಭೇಟಿ ನೀಡಿದ ಅವರು, ಅಲ್ಲಿ ಮಿಲಿಟರಿ ಕಮಾಂಡರ್‌ಗಳನ್ನು ಭೇಟಿಯಾಗಿ ಚರ್ಚಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ.

ನಾರ್ವೆಗೆ ಭೇಟಿ ಕೊಡುವ ಮೊದಲು ವೈಸ್‌ಬಾಡೆನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯಲ್ಲಿ ಇಳಿದುಕೊಂಡ ಝೆಲೆನ್‌ಸ್ಕಿ, ‘ಉಕ್ರೇನ್‌ಗೆ ಅಮೆರಿಕವು ಒದಗಿಸುತ್ತಿರುವ ಅತ್ಯುತ್ತಮ ಗುಣಮಟ್ಟದ ಸೇನಾ ನೆರವಿನ ಬಗ್ಗೆ ನನಗೆ ಮತ್ತೊಮ್ಮೆ ಮನದಟ್ಟಾಗಿದೆ. ನಮ್ಮ ಗೆಲುವಿಗೆ ಇಂತಹ ನಿರ್ಣಾಯಕ ನೆರವಿನ ಅಗತ್ಯವಿದೆ’ ಎಂದೂ ಹೇಳಿದ್ದಾರೆ.

ADVERTISEMENT

ಅಮೆರಿಕ ಸೇನೆಯ ಐರೋಪ್ಯ ಕಮಾಂಡ್‌ ತನ್ನ ಹೇಳಿಕೆಯಲ್ಲಿ, ‘ಉಕ್ರೇನ್‌ ಯುದ್ಧಭೂಮಿಯಲ್ಲಿನ ತುರ್ತು ಅಗತ್ಯಗಳನ್ನು ಪೂರೈಸುವ ಪ್ರಯತ್ನಗಳು ಮತ್ತು ಉಕ್ರೇನ್‌ ಪಡೆಗಳಿಗೆ ನೀಡಲಾಗುತ್ತಿರುವ ತರಬೇತಿಯ ಬಗ್ಗೆ ಚರ್ಚೆ ನಡೆದಿದೆ. ಜರ್ಮನಿ ಮತ್ತು ಯುರೋಪ್ ಹಾಗೂ ಅಮೆರಿಕದ ಹಲವು ಸ್ಥಳಗಳಲ್ಲಿ ತರಬೇತಿ ನಡೆಯುತ್ತಿದೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.