ADVERTISEMENT

ಯುದ್ಧಪರಾಧಕ್ಕಾಗಿ ರಷ್ಯಾ ಕಾನೂನು ಕ್ರಮ ಎದುರಿಸಬೇಕು: ಝೆಲೆನ್‌ಸ್ಕಿ

ಏಜೆನ್ಸೀಸ್
Published 4 ಮಾರ್ಚ್ 2023, 15:20 IST
Last Updated 4 ಮಾರ್ಚ್ 2023, 15:20 IST
ಝೆಲೆನ್‌ಸ್ಕಿ 
ಝೆಲೆನ್‌ಸ್ಕಿ    

ಎಲ್ವಿವ್: ಅಮೆರಿಕದ ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಮತ್ತು ಯುರೋಪಿನ ಉನ್ನತ ಕಾನೂನು ಅಧಿಕಾರಿಗಳ ಜತೆಗೆ ವರ್ಚುವಲ್ ಮೂಲಕ ಮಾತನಾಡಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಯುದ್ಧಾಪರಾಧಗಳಿಗಾಗಿ ರಷ್ಯಾವು ಅಂತರರಾಷ್ಟ್ರೀಯ ಕಾನೂನು ಕ್ರಮ ಎದುರಿಸಬೇಕು ಎಂದು ಆಗ್ರಹಿಸಿದ್ದಾರೆ.

ಉಕ್ರೇನ್‌ನ ಲಿವಿವ್ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಯುದ್ಧಾಪರಾಧಕ್ಕಾಗಿ ರಷ್ಯಾಕ್ಕೆ ಅಂತರರಾಷ್ಟ್ರೀಯ ನ್ಯಾಯಾಲಯ ಶಿಕ್ಷೆ ವಿಧಿಸುವಂತೆ ಮಾಡುವ ನಿಟ್ಟಿನಲ್ಲಿ ನಾವು ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಸಭೆಯಲ್ಲಿ ಬ್ರಿಟನ್‌ನ ಅಟಾರ್ನಿ ಜನರಲ್ ವಿಕ್ಟೋರಿಯಾ ಪ್ರೆಂಟಿಸ್, ಸ್ಪೇನ್‌ನ ಅಟಾರ್ನಿ ಜನರಲ್ ಅಲ್ವಾರೊ ಗಾರ್ಸಿಯಾ ಒರ್ಟಿಜ್ ಮತ್ತು ಯುರೋಪಿಯನ್ ಕಮಿಷನರ್ ಫಾರ್ ಜಸ್ಟೀಸ್ ಡಿಡಿಯರ್ ರೆಂಡರ್ಸ್ ಇದ್ದರು.

ADVERTISEMENT

ಬಖ್ಮಟ್‌ನಿಂದ ಜನರ ತೆರವು

ಕೀವ್: ಬಖ್ಮಟ್‌ನಲ್ಲಿ ರಷ್ಯಾ ಪಡೆಗಳು ದಾಳಿ ತೀವ್ರಗೊಳಿಸಿವೆ. ಹೀಗಾಗಿ, ಇಲ್ಲಿನ ನಿವಾಸಿಗಳು ಹಾಗೂ ಬೀಡು ಬಿಟ್ಟಿರುವ ಉಕ್ರೇನ್‌ ಸೈನಿಕರು ನಗರ ತೊರೆಯುತ್ತಿದ್ದಾರೆ.

ಶನಿವಾರ ನಡೆದ ರಷ್ಯಾ ದಾಳಿಯಲ್ಲಿ ಮಹಿಳೆ ಮೃತಪಟ್ಟಿದ್ದು, ಇಬ್ಬರು ಪುರುಷರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಸೇನೆ ಹೇಳಿದೆ. ನಗರ ತೊರೆಯುವ ಸಲುವಾಗಿ ನಿರ್ಮಿಸಲಾಗಿರುವ ತಾತ್ಕಾಲಿಕ ಸೇತುವೆ ದಾಟುವಾಗ ಈ ದಾಳಿ ನಡೆದಿದೆ.

‘ರಷ್ಯಾ ಪಡೆಗಳು ದಾಳಿಯನ್ನು ತೀವ್ರಗೊಳಿಸಿವೆ. ಈ ಕಾರಣಕ್ಕೆ, ನಗರವನ್ನು ತೊರೆಯಲು ವಾಹನಗಳನ್ನು ಬಳಸುವುದು ಬಹಳ ಅಪಾಯಕಾರಿ. ಹೀಗಾಗಿ ಎಲ್ಲರೂ ನಡೆದುಕೊಂಡೇ ಸಾಗುವ ಅನಿವಾರ್ಯತೆ ಇದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.