ಸೆಪ್ಟೆಂಬರ್ 7.. ಭಾನುವಾರ ರಾತ್ರಿ 9.57ರಿಂದ ಚಂದ್ರಗ್ರಹಣ ಪ್ರಕ್ರಿಯೆ ಆರಂಭವಾಗಲಿದೆ. 11.01ರಿಂದ 12.23ರ ಅವಧಿಯಲ್ಲಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಸೋಮವಾರ ಮುಂಜಾನೆ 2.25ಕ್ಕೆ ಅಂತ್ಯಗೊಳ್ಳುತ್ತದೆ. ಈ ವಿದ್ಯಮಾನದಲ್ಲಿ ಬಿಳಿ ಬಣ್ಣದಲ್ಲಿರುವ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ.
ಈ ಗ್ರಹಣವು ಭಾರತದಾದ್ಯಂತವೂ (ದೇಶದ ಬಹುತೇಕ ಭಾಗಗಳಲ್ಲಿ) ಸ್ಪಷ್ಟವಾಗಿ ದೃಶ್ಯಮಾನವಾಗಲಿದ್ದು, ಈ ಸಂಬಂಧ ದೇಶಾದ್ಯಂತ ಹಲವೆಡೆ ದೇವಾಲಯಗಳನ್ನು ಮುಚ್ಚಲಾಗಿರುತ್ತದೆ. ಭಾನುವಾರ ಭಾದ್ರಪದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ ಖಗ್ರಾಸ ರಾಹುಗಾಸ್ತ್ರ ಚಂದ್ರಗ್ರಹಣ ಇರುವುದರಿಂದ ಈ ಕೆಳಗೆ ತಿಳಿಸಲಾದ ತಪ್ಪುಗಳನ್ನು ಮಾಡಬೇಡಿ.
ಚಂದ್ರಗ್ರಹಣದ ಸಮಯದಲ್ಲಿ ಕೋಪಗೊಳ್ಳಬಾರದು. ಈ ದಿನ ಕೋಪಗೊಳ್ಳುವುದರಿಂದ ಮುಂದಿನ ಹದಿನೈದು ದಿನಗಳ ಕಾಲ ನಿಮಗೆ ಅಪಾಯವು ಎದುರಾಗುತ್ತದೆ.
ಚಂದ್ರಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬೇಡಿ, ಇದಲ್ಲದೆ ಪೂಜೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ.
ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ನಿರ್ಜನ ಸ್ಥಳ ಅಥವಾ ಸ್ಮಶಾನಕ್ಕೆ ಹೋಗಬಾರದು. ಈ ಸಮಯದಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಾಬಲ್ಯ ಸಾಧಿಸುತ್ತದೆ.
ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಾರದು. ಏಕೆಂದರೆ ಗ್ರಹಣದ ಸಮಯದಲ್ಲಿ ನಕರಾತ್ಮಕ ಶಕ್ತಿಯು ಮೇಲುಗೈ ಸಾಧಿಸುತ್ತದೆ.
ಗ್ರಹಣದ ಸಮಯದಲ್ಲಿ ಗಂಡ ಹಾಗೂ ಹೆಂಡತಿ ದೈಹಿಕವಾಗಿ ಸೇರಬಾರದು. ಹೀಗೆ ಮಾಡುವುದರಿಂದ ಮನೆಯ ಶಾಂತಿ ಮತ್ತು ಸಂತೋಷ ಹಾಳಾಗಬಹುದು.
ಚಂದ್ರಗ್ರಹಣದ ಸಮಯದಲ್ಲಿ ದೇವರ ಮಂತ್ರಗಳನ್ನು ಪಠಿಸುವುದು ತುಂಬಾನೇ ಒಳ್ಳೆಯದು. ಇದು 10 ಪಟ್ಟು ಹೆಚ್ಚು ಶುಭ ಫಲಗಳನ್ನು ನೀಡುತ್ತದೆ ಎನ್ನುವ ಧಾರ್ಮಿಕ ನಂಬಿಕೆ ಇದೆ.
ಚಂದ್ರ ಗ್ರಹಣದ ನಂತರ ಶುದ್ಧ ನೀರಿನಿಂದ ಸ್ನಾನ ಮಾಡಿ ಬಡವರಿಗೆ ನಿಮ್ಮ ಕೈಲಾದಷ್ಟು ದಾನ ಮಾಡಬೇಕು.
ಚಂದ್ರಗ್ರಹಣದ ನಂತರ ಇಡೀ ಮನೆಯನ್ನು ಶುದ್ಧೀಕರಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ಎಲ್ಲಾ ನಕರಾತ್ಮಕ ಶಕ್ತಿಗಳು ದೂರವಾಗುತ್ತವೆ.
ಗ್ರಹಣದ ಸಮಯದಲ್ಲಿ ಹಸುಗಳಿಗೆ ಹುಲ್ಲು, ಪಕ್ಷಿಗಳಿಗೆ ಆಹಾರ ಮತ್ತು ನಿರ್ಗತಿಕರಿಗೆ ಬಟ್ಟೆಗಳನ್ನು ದಾನ ಮಾಡುವುದರಿಂದ ಹೆಚ್ಚಿನ ಪುಣ್ಯ ನಿಮಗೆ ಸಿಗುತ್ತದೆ ಎನ್ನುವ ನಂಬಿಕೆ ಇದೆ.
ಚಂದ್ರಗ್ರಹಣ ಮುಗಿದ ಮೇಲೆ ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಗ್ರಹಣದ ಪರಿಣಾಮ ದೂರವಾಗುವುದರ ಜೊತೆಗೆ ಜೀವನದಲ್ಲಿ ಸಂತೋಷ ಸಮೃದ್ಧಿ, ಸುಖ ಶಾಂತಿ ನೆಮ್ಮದಿ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.