ADVERTISEMENT

ಚುರುಮುರಿ| ಓಝೋನ್, ಗ್ರೀನ್ ಝೋನ್‌

ಮೋಹನ್ ಕುಮಾರ್‌
Published 15 ಮೇ 2020, 20:00 IST
Last Updated 15 ಮೇ 2020, 20:00 IST
.
.   

‘ಹಲೋ ಗೌಡ್ರೆ ಹೇಗಿದ್ದೀರಾ?’ ಫೋನ್ ರಿಂಗಣಿಸಿತು. ‘ಹೋ! ಶಾನುಭೋಗರಾ, ನಾನು ಚಂದ ಇದೀನಿ, ನೀವು?’

‘ಅಂದಹಾಗೆ ನಿಮ್ಮದು ಯಾವ ಗ್ರೂಪ್?’

‘ಇದೇನು ಶಾನುಭೋಗರೆ ಇಂಗೆ ಕೇಳ್ತೀರಾ, ನಿಮಗೆ ಗೊತ್ತಿಲ್ವೇ?’

ADVERTISEMENT

‘ಹಂಗಲ್ಲ ಗೌಡ್ರೆ, ಗ್ರೂಪ್ ಅಂದ್ರೆ ಜನರಲ್, ಓಬಿಸಿ ಅದಲ್ಲ’.

‘ಮತ್ತಿನ್ಯಾವುದು? ಎ+, ಬಿ+ ಅಂತಾರಲ್ಲ, ಆ ಬ್ಲಡ್ ಗ್ರೂಪಾ?’

‘ಅದೂ ಅಲ್ಲ ಗೌಡ್ರೆ, ಅವೆಲ್ಲಾ ಈಗ ಓಲ್ಡ್ ಆಗೋದೊ. ಈಗೆಲ್ಲಾ ರೆಡ್ ಝೋನ್, ಆರೆಂಜ್ ಝೋನ್, ಗ್ರೀನ್ ಝೋನ್ ಅಂತ ಹೊಸ ಗ್ರೂಪ್‌ಗಳು ಬಂದಿವೆ. ಹಿಂದೆ ಬಿ.ಸಿ, ಎ.ಡಿ ಅಂತಿದ್ರಲ್ಲ, ಈಗ ಬಿ.ಸಿ, ಎ.ಸಿ ಆಗಿದೆ’.

‘ಹಂಗಂದ್ರೆ?’ ತಲೆ ಕೆರೆದುಕೊಂಡರು ಗೌಡರು. ‘ಬಿಫೋರ್ ಕೊರೊನಾ, ಆಫ್ಟರ್ ಕೊರೊನಾ ಅಂತ. ಈಗ ಗ್ರೀನ್ ಝೋನ್‌ನಲ್ಲಿ ಇರೋರು ಸರ್ವತಂತ್ರ ಸ್ವತಂತ್ರರು ಅಂತ, ಗ್ರೀನ್ ಮತ್ತು ಆರೆಂಜ್‌ ಝೋನ್‌ ಮಧ್ಯೆ ಹೊಯ್ದಾಡ್ತಾ ಇರೋರೆಲ್ಲ ಈಗಷ್ಟೇ ಸ್ವಾತಂತ್ರ್ಯ ಕಳೆದುಕೊಂಡವರು, ಆರೆಂಜ್ ಝೋನ್‌ನವರು ಸ್ವಾತಂತ್ರ್ಯ ಸಿಗುವ ಆಸೆಯಲ್ಲಿ ಇರುವವರು, ಇನ್ನು ರೆಡ್ ಝೋನ್‌ನವರು ಕೈದಿಗಳು ಅಂತ’. ಶಾನುಭೋಗರ ಗ್ರೂಪ್ ವಿಂಗಡಣೆಯಿಂದ
ಕಕ್ಕಾಬಿಕ್ಕಿಯಾದ ಗೌಡರು ‘ರೆಡ್, ಆರೆಂಜ್ ಮಧ್ಯೆ ಹೊಯ್ದಾಡ್ತಾ ಇರೋರು?’ ಅಂದ್ರು.

‘ಅವರ ಬಗ್ಗೆ ನಮ್ಮ ಹೈಕ್ಳ ಕಡೆಯಿಂದ ಇನ್ನಷ್ಟೇ ಡೆಫಿನಿಷನ್ನು ಬರಬೇಕಿದೆ’.

‘ಹಂಗಾದ್ರೆ ಈ ಝೋನ್‌ಗಳು ಅಷ್ಟೊಂದು ಮುಖ್ಯ ಅಂತೀರಾ?’

‘ಓಝೋನ್‌ಗಿಂತಲೂ ಗ್ರೀನ್ ಝೋನ್ ಬಹಳ ಮುಖ್ಯ ಗೌಡ್ರೆ’.

‘ಹಂಗಾದ್ರೆ ನಮ್ಮೂರಿನ ಹೈಕಳಿಗೆ ಉಗಿದು ಬುದ್ಧಿ ಹೇಳಿ, ಗ್ರೀನ್ ಝೋನ್ ಇರೋ ಹಾಗೆ ನೋಡ್ಕೋತೀನಿ’.

‘ಫಸ್ಟ್ ಆ ಕೆಲಸ ಮಾಡಿ, ಅಪ್ಪಿತಪ್ಪಿ ರೆಡ್ ಝೋನ್ ಆದ್ರೆ ಮುಗೀತು ಕತೆ, ಎಲ್ಲಾ ಒಳಗಡೇನೆ’.

‘ಹಂಗಂದ್ರೆ ಏನ್ ಶಾನುಭೋಗರೆ?’

‘ಊರಿಗೆ ಊರೇ ಸೀಲ್‌ಡೌನ್’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.