ADVERTISEMENT

ದೇಸಿ ಯೋಗ ಚೀನಾ ಮ್ಯಾಟು!

ಗುರು ಪಿ.ಎಸ್‌
Published 25 ಜೂನ್ 2019, 20:00 IST
Last Updated 25 ಜೂನ್ 2019, 20:00 IST
.
.   

ಮ್ಯಾಟುಗಳನ್ನು ಸುತ್ತಿ ಬಗಲಲ್ಲಿಟ್ಟುಕೊಂಡು ಬರುತ್ತಿದ್ದ ಮುದ್ದಣ್ಣ. ‘ಏನಣ್ಣ ಇದು ನಿನ್ನ ಅವತಾರ... ಎಲ್ಲಿಂದ ಬರ್ತಿದ್ದೀಯಾ?’ ಕುತೂಹಲದಿಂದ ಕೇಳ್ದ ವಿಜಿ. ‘ಗೆಸ್ ಮಾಡಿ ನೋಡೋಣ’ ಸವಾಲು ಹಾಕಿದ.

‘ಗ್ರಾಮ ವಾಸ್ತವ್ಯ ಮುಗಿಸ್ಕೊಂಡು ಬರ್ತಿದ್ದೀಯ ಅನ್ಸುತ್ತೆ’ ಕಿಚಾಯಿಸಿದ ವಿಜಿ.

‘ರಾಂಗ್ ಆನ್ಸರ್... ಯೋಗ ಶಿಬಿರ ಮುಗಿಸ್ಕೊಂಡ್ ಬರ್ತಿದ್ದೀನಿ ಸಾರ್... ಹರಿಯಾಣಕ್ಕೆ ಹೋಗಿದ್ದೆ. ಗವರ್ನಮೆಂಟ್‌
ನವರೇ ಯೋಗ ಡೇ ಫಂಕ್ಷನ್ ಮಾಡ್ತಿದ್ರು. ಯೋಗ ಮಾಡೋರಿಗೆ ಅನುಕೂಲ ಆಗ್ಲಿ ಅಂತಾ ಚೀನಾ ಮ್ಯಾಟ್ ಕೂಡ ಹಾಕ್ಸಿದ್ರು. ಯೋಗಾಸನ ಮುಗಿದಿದ್ದೇ ತಡ ಮ್ಯಾಟ್ ಎತ್ಕೊಂಡ್ ಓಡ್‌ ಬಂದ್ಬಿಟ್ಟೆ’ ಎಂದ ಮುದ್ದಣ್ಣ.

ADVERTISEMENT

‘ದೇಸಿ ಯೋಗಕ್ಕೆ, ವಿದೇಸಿ ಮ್ಯಾಟಾ...? ಇದರಲ್ಲಿ ಬೇರೆ ಮ್ಯಾಟರ್ ಏನೋ ಇದ್ದಂಗಿದೆಯಲ್ಲ...’ ಪ್ರಶ್ನಿಸಿದ ವಿಜಿ.

‘ಇದ್ದೇ ಇದೆ ಸಾರ್... ಫಾರಿನ್‌ನಲ್ಲಿ ಈ ಮ್ಯಾಟ್‌ಗಳನ್ನ ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿಯಂಥವರೆಲ್ಲ
ಬಳಸ್ತಿದ್ದರಂತೆ. ಇದರ ಮೇಲೇ ಅವರು ‘ಎಸ್ಕೇಪಾಸನ’ ಕಲಿತಿದ್ದಂತೆ... ಅದಕ್ಕೇ ನೋಡಿ, ಯೋಗ ಡೇ ಆದ್ಮೇಲೆ ಬ್ಯಾಂಕ್‌ ಆಫೀಸರ್‌ಗಳೇ ರಾಜೀನಾಮೆ ಕೊಟ್ಟು ಮ್ಯಾಟ್ ಹುಡುಕೋಕೆ ಹೋಗಿದ್ದಾರೆ’ ಮುದ್ದಣ್ಣನ ವಿಶ್ಲೇಷಣೆ ಸಾಗಿತ್ತು.

‘ಮ್ಯಾಟ್‌ನಲ್ಲಿ ಮತ್ತೇನಿದೆ ಸ್ಪೆಷಾಲಿಟಿ?’

‘ಇದರ ಮೇಲೆ ಕುಳಿತವರಿಗೆ ಕೆಲವೊಂದು ಪದ ಹೇಳೋಕೆ ಸಾಧ್ಯವೇ ಇಲ್ಲ. ಅದಕ್ಕೆ
ನಮ್ ಸಿಯೆಮ್ಮು ಸಾಹೇಬ್ರು ಐವತ್ತು
ಮ್ಯಾಟ್ ಬುಕ್ ಮಾಡವ್ರೆ... ಕೆಲವರಿಗೆ ಹಂಚೋಕೆ...’

‘ಅದ್ಯಾವ ಪದಗಳು... ಹೇಳೋಕೇ ಆಗದೇ ಇರುವಂಥವು?’

‘ಮಧ್ಯಂತರ ಚುನಾವಣೆ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.