ADVERTISEMENT

ಚುರುಮುರಿ | ರಜಾ ಮಜಾ

ಆನಂದ ಉಳಯ
Published 28 ಡಿಸೆಂಬರ್ 2022, 23:15 IST
Last Updated 28 ಡಿಸೆಂಬರ್ 2022, 23:15 IST
   

2023ರ ರಜಾದಿನಗಳನ್ನು ಸದುಪಯೋಗ ಮಾಡಿಕೊಂಡು ಇನ್ನಷ್ಟು ರಿಲಾಕ್ಸ್ ಮಾಡಿಕೊಳ್ಳಲು ‘ಕಷ್ಟಪಟ್ಟು’ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಈ ಸಲಹೆಗಳು:

ಹೊಸ ವರ್ಷ ರಜಾ ದಿನದಿಂದಲೇ ಶುರು. ಗ್ರೇಟ್. ಆದರೆ ಸಂಕ್ರಾಂತಿ, ಸೆಕೆಂಡ್ ಸಾಟರ್ಡೆ. ಮಾಮೂಲಿ ರಜೆ. ರಿಪಬ್ಲಿಕ್ ಡೆ ಗುರುವಾರ. ಶುಕ್ರವಾರ ಆಗಿದ್ದರೆ ಶನಿವಾರ ಫೋರ್ಥ್ ಸಾಟರ್ಡೆ, ಮರುದಿನ ಭಾನುವಾರ ರಜೆ ಸೇರಿ ಮೂರು ದಿನ ರಜೆ ಆಗುತ್ತಿತ್ತು.

ಫೆಬ್ರುವರಿ ಯೂಸ್‍ಲೆಸ್, ರಜೆ ಇಲ್ಲ. ಮಾರ್ಚ್‌ನಲ್ಲಿ ಹೋಳಿ, ಉಗಾದಿ, ರಾಮನವಮಿ ಮೂರೂ ವಾರದ ಮಧ್ಯದಲ್ಲಿ ಬರುತ್ತವೆ.
ಅಫಿಕ್ಸ್‌–ಸಫಿಕ್ಸ್‌ ಅವಕಾಶವಿಲ್ಲ.

ADVERTISEMENT

ಏಪ್ರಿಲ್ ಬಂಪರ್. ಮಹಾವೀರ ಜಯಂತಿ ಸೋಮವಾರ. ಹಿಂದಿನ ದಿನ ಭಾನುವಾರ ಸೇರಿಸಿದರೆ ಎರಡು ದಿನ ರಜೆ. ಗುಡ್‍ಫ್ರೈಡೆ ಶುಕ್ರವಾರ, ಮರುದಿನ ಸೆಕೆಂಡ್ ಸಾಟರ್ಡೆ. ನಂತರ ಭಾನುವಾರ. ಸೊ, ಮೂರು ದಿನ ರಜೆ. ಎಂಜಾಯ್. 14 ಶುಕ್ರವಾರ ಅಂಬೇಡ್ಕರ್ ಜಯಂತಿ, 22 ಈದ್ ಶನಿವಾರ, ಭಾನುವಾರ ರಜೆ. ಬಸವ ಜಯಂತಿ ಭಾನುವಾರ ಬಂದಿದ್ದರಿಂದ ರಜೆ ಲಾಸ್.

ಮೇ, ಜೂನ್, ಜುಲೈ, ಆಗಸ್ಟ್‌ನಲ್ಲಿ ಒಂದೊಂದೇ ರಜೆ. ಪಂದ್ರ ಆಗಸ್ಟ್ ಮಂಗಳವಾರ ಬಂದಿದೆ. ಸೋಮವಾರ ಸೇರಿಸಿದರೆ ಮೂರು ದಿನ ರಜೆ ಮಾಡಬಹುದು. ಅದೇ ರೀತಿ ಗಣೇಶನ ಹಬ್ಬ ಸೆಪ್ಟೆಂಬರ್‌ನಲ್ಲಿ. ಅಕ್ಟೋಬರ್ 2 ಗಾಂಧಿ ಜಯಂತಿ ಸೋಮವಾರ. ಹಿಂದಿನ ದಿನ ಭಾನುವಾರ ಸೇರುವುದರಿಂದ ಎರಡು ದಿನ ರಜೆ.

ಅಕ್ಟೋಬರ್ ಬಂಪರ್. ಮಹಾಲಯ ಅಮಾವಾಸ್ಯೆ, ಮಹಾನವಮಿ, ವಿಜಯದಶಮಿ, ವಾಲ್ಮೀಕಿvಜಯಂತಿ ಶನಿವಾರ, ಸೋಮವಾರ, ಮಂಗಳವಾರ ಬರುತ್ತವೆ. ತಿಂಗಳ ಕೊನೆ. ಜೇಬಿನಲ್ಲಿ ಹಣ ಇದ್ದರೆ ಸಫಿಕ್ಸ್-ಅಫಿಕ್ಸ್ ಮಾಡಿಕೊಂಡು ತಿರುಗಾಡಬಹುದು. ನವೆಂಬರ್‌ನಲ್ಲಿ ಇನ್ನೊಂದು ಬಂಪರ್. ರಾಜ್ಯೋತ್ಸವ, ದೀಪಾವಳಿ ಮತ್ತು ಕನಕ ಜಯಂತಿ. ಎಲ್ಲವೂ ಸೆಪರೇಟ್. ಡಿಸೆಂಬರ್‌ನಲ್ಲಿ ಒಂದೇ– ಕ್ರಿಸ್‍ಮಸ್ ಸೋಮವಾರದಂದು, ಆದರೆ ಶನಿವಾರ ಭಾನುವಾರವೂ ರಜೆ. ಮಜವೋ ಮಜ.

ಉಳಿದ ದಿನಗಳಲ್ಲಾದರೂ ಕೆಲಸ ಮಾಡಬಹುದಲ್ಲವೆ ಆಫೀಸಿನಲ್ಲಿ? ಯೋಚಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.