ADVERTISEMENT

25 ವರ್ಷಗಳ ಹಿಂದೆ | ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಇಲ್ಲದೆ ಗಂಭೀರ ಪರಿಸ್ಥಿತಿ

ಗುರುವಾರ, 13–7–1995

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 16:31 IST
Last Updated 12 ಜುಲೈ 2020, 16:31 IST

ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಇಲ್ಲದೆ ಗಂಭೀರ ಪರಿಸ್ಥಿತಿ
ಬೆಂಗಳೂರು, ಜುಲೈ 12–
ಧಾರಾಕಾರವಾಗಿ ಮಳೆ ಸುರಿಯುತ್ತಿರುವುದಾಗಿ ವರದಿಗಳು ಬಂದಿರುವ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶ, ಶಿವಮೊಗ್ಗ, ಕೊಡಗು ಮುಂತಾದ ಕೆಲವು ಜಿಲ್ಲೆಗಳನ್ನು ಬಿಟ್ಟರೆ ರಾಜ್ಯದ 12 ಜಿಲ್ಲೆಗಳಲ್ಲಿ ಮಳೆಯೇ ಇಲ್ಲದೆ ಬಹುತೇಕ ತಾಲ್ಲೂಕುಗಳಲ್ಲಿ ಒಣಹವೆ ಮುಂದುವರಿದು ಗಂಭೀರ ಪರಿಸ್ಥಿತಿ ಉಂಟಾಗುತ್ತಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ಮಂಡ್ಯ, ಬಳ್ಳಾರಿ, ರಾಯಚೂರು, ಕಲ್ಬುರ್ಗಿ, ಬೀದರ್‌, ಬೆಳಗಾವಿ, ವಿಜಾಪುರ ಜಿಲ್ಲೆಗಳ ಸುಮಾರು 49 ತಾಲ್ಲೂಕುಗಳಲ್ಲಿ ಹನಿ ಮಳೆಯೂ ಆಗದೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಜುಲೈ 8ಕ್ಕೆ ಅಂತ್ಯಗೊಂಡ ವಾರದ ಅವಧಿಯ ಅಧಿಕೃತ ವರದಿ ವಿವರಿಸಿದೆ.

ಅಂಗವಿಕಲ ಮಕ್ಕಳಿಗೆ ಇತರರಜತೆ ಶಿಕ್ಷಣ ಕಡ್ಡಾಯ
ಬೆಂಗಳೂರು, ಜುಲೈ 12
– ಈಗ ‘ಅಸ್ಪೃಶ್ಯರಂತೆ’ ಕಾಣುತ್ತಿರುವ ಅಂಗವಿಕಲ ಮಕ್ಕಳನ್ನೂ ಇತರ ಮಕ್ಕಳ ಜತೆಯಲ್ಲಿ ಶಾಲೆಗೆ ಕಡ್ಡಾಯವಾಗಿ ಸೇರಿಸಿಕೊಳ್ಳುವಂತೆ ಮಾಡುವ ನಿಯಮವನ್ನು ಸರ್ಕಾರ ಇನ್ನೊಂದು ತಿಂಗಳಲ್ಲಿ ಜಾರಿಗೆ ತರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್‌.ಜಿ. ಗೋವಿಂದೇಗೌಡ ಇಂದು ಇಲ್ಲಿ ತಿಳಿಸಿದರು.

ADVERTISEMENT

ಇಂಥ ನಿಯಮವೊಂದು ಈಗ ಇಲ್ಲವಾದ್ದರಿಂದ ಸರ್ಕಾರದ ಅನುದಾನ ಪಡೆಯುವ ಶಾಲಾ ಆಡಳಿತ ವರ್ಗದವರು ಈ ನತದೃಷ್ಟ ಮಕ್ಕಳನ್ನು ತರಗತಿಗೆ ಸೇರಿಸಿಕೊಳ್ಳುವುದಕ್ಕೆ ನಿರಾಕರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.