ADVERTISEMENT

25 ವರ್ಷಗಳ ಹಿಂದೆ: ಸೋಮವಾರ–1997

​ಪ್ರಜಾವಾಣಿ ವಾರ್ತೆ
Published 11 ಮೇ 2022, 21:59 IST
Last Updated 11 ಮೇ 2022, 21:59 IST
   

ಗಂಗಾವತಿ: ನದಿ ನೀರು ಮಲಿನ– ಮೂವರ ಸಾವು

ಗಂಗಾವತಿ, ಮೇ 11– ಹೊಸಪೇಟೆ ಬಳಿಯ ಸಕ್ಕರೆ ಕಾರ್ಖಾನೆಯಿಂದ ವಿಷಪೂರಿತ ರಾಸಾಯನಿಕಗಳನ್ನು ತುಂಗಭದ್ರಾ ನದಿಗೆ ಹಾಕಿದ ಪರಿಣಾಮವಾಗಿ ನದಿ ನೀರು ಮಲಿನವಾಗಿದ್ದು, ಅದನ್ನು ಸೇವಿಸಿದ ಮೂವರು ಗ್ರಾಮಸ್ಥರು ಸಾವನ್ನಪ್ಪಿದ್ದಾರೆ. ಐದು ಜನರ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

8 ಸಾವಿರ ಲೀಟರ್‌ ಸಾಮರ್ಥ್ಯದ ನಾಲ್ಕು ಟ್ಯಾಂಕರುಗಳಲ್ಲಿ ಈ ರಾಸಾಯನಿಕ ಇತ್ತು. ಆ ಟ್ಯಾಂಕರುಗಳು ಒಡೆದು ಹೋದುದರಿಂದ ರಾಸಾಯನಿಕವನ್ನು ಕಾಲುವೆಗೆ ಬಿಡಲಾಗಿತ್ತು.

ADVERTISEMENT

ತುಂಗಾ ಮೇಲ್ದಂಡೆ: ಬಾಂಡ್‌ ಮೂಲಕ ಹಣ ಸಂಗ್ರಹ

ಮಂಗಳೂರು, ಮೇ 11– ತುಂಗಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ಬಾಂಡ್‌ಗಳ ಮೂಲಕ ಜನರಿಂದ ಹಣ ಸಂಗ್ರಹಿಸಲು ಸರ್ಕಾರ ಆಲೋಚಿಸುತ್ತಿದೆ ಎಂದು ಭಾರೀ ನೀರಾವರಿ ಸಚಿವ ಕೆ.ಎನ್‌. ನಾಗೇಗೌಡ ಹೇಳಿದರು.

ಕೃಷ್ಣಾ ಜಲಭಾಗ್ಯ ಬಾಂಡ್‌ಗಳ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆಗೆ 800 ಕೋಟಿ ರೂ.ಗಳನ್ನು ಸಂಗ್ರಹಿಸಿದ ಹಾಗೆ ತುಂಗಾ ಮೇಲ್ದಂಡೆ ಯೋಜನೆಗೂ ಜನರಿಂದ ಹಣ ಸಂಗ್ರಹಿಸುವ ಪ್ರಸ್ತಾವ ಸಚಿವ ಸಂಪುಟದ ಮುಂದಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.