ADVERTISEMENT

25 ವರ್ಷಗಳ ಹಿಂದೆ: ಲೋಕಸಭೆಗೆ ಐದು ಹಂತದಲ್ಲಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 19:48 IST
Last Updated 11 ಜುಲೈ 2024, 19:48 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಲೋಕಸಭೆಗೆ ಐದು ಹಂತದಲ್ಲಿ ಚುನಾವಣೆ

ನವದೆಹಲಿ, ಜುಲೈ 11 (ಪಿಟಿಐ, ಯುಎನ್‌ಐ)– ಜಮ್ಮು ಮತ್ತು ಕಾಶ್ಮೀರವೂ ಸೇರಿದಂತೆ ದೇಶದಾದ್ಯಂತ ಐದು ಹಂತಗಳಲ್ಲಿ ಸೆಪ್ಟೆಂಬರ್‌ 4ರಿಂದ ಅಕ್ಟೋಬರ್‌ 1ರವರೆಗೆ ಲೋಕಸಭೆಗೂ, ಇದರ ಜತೆಯಲ್ಲೇ ಕರ್ನಾಟಕ, ಆಂಧ್ರಪ್ರದೇಶ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ.

ಕರ್ನಾಟಕ ವಿಧಾನಸಭೆಗೆ ಎರಡು ಹಂತಗಳಲ್ಲಿ ಸೆಪ್ಟೆಂಬರ್ 4 ಹಾಗೂ 11ರಂದು ಮತದಾನವಾಗಲಿದೆ. ದೇಶದಾದ್ಯಂತ ಲೋಕಸಭೆಗೆ ಸೆಪ್ಟೆಂಬರ್ 4, 11, 17, 24 ಹಾಗೂ ಅಕ್ಟೋಬರ್ 1ರಂದು ಮತ
ದಾನವಾಗಲಿದ್ದು, ಎಲ್ಲ ಮತಗಳ ಎಣಿಕೆಯು ಅಕ್ಟೋಬರ್ ಐದು ಹಾಗೂ ಆರರಂದು ನಡೆಯಲಿದೆ.

ADVERTISEMENT

ದಳದಲ್ಲಿ ಒಗ್ಗಟ್ಟು ಮೂಡಿಸಲು ಶರದ್ ತೀವ್ರ ಯತ್ನ

ಬೆಂಗಳೂರು, ಜುಲೈ 11– ನಾಯಕರಲ್ಲಿನ ವೈಯಕ್ತಿಕ ದ್ವೇಷ–ವೈಷಮ್ಯ ಚಿವುಟಿ ಹಾಕಿ ಜುಲೈ 14ರ ರಾಜ್ಯ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಶಕ್ತಿ ಸಾಮರ್ಥ್ಯ ಹಾಗೂ ಒಗ್ಗಟ್ಟಿನ ಪ್ರದರ್ಶನ ಆಗಬೇಕು ಎನ್ನುವ ದಿಕ್ಕಿನಲ್ಲಿ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಅವರು ಮುಖಂಡರೊಡನೆ ಮಾತುಕತೆನಡೆಸುವ ಮೂಲಕ ಸತತ ಪ್ರಯತ್ನ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.