
25 ವರ್ಷಗಳ ಹಿಂದೆ ಈ ದಿನ
ಉತ್ತರ ಭಾರತ: ಚಳಿಗೆ 23 ಸಾವು
ನವದೆಹಲಿ, ಜ. 4 (ಪಿಟಿಐ)– ಚಳಿ ತಡೆಯಲಾಗದೆ ಉತ್ತರ ಪ್ರದೇಶದಲ್ಲಿ 23 ಮಂದಿ ಮೃತಪಟ್ಟಿದ್ದಾರೆ.
ಬರೇಲಿಯಲ್ಲಿ ಏಳು, ಆಗ್ರಾ ಮತ್ತು ಅಂಬೇಡ್ಕರ್ ನಗರದಲ್ಲಿ ತಲಾ ಐವರು, ಬಲ್ಲಿಯಾದಲ್ಲಿ ಮೂವರು, ಸಿದ್ಧಾರ್ಥನಗರದಲ್ಲಿ ಇಬ್ಬರು ಹಾಗೂ ಮೊರದಾಬಾದ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಈ ಪ್ರದೇಶಗಳಲ್ಲಿ ಉಷ್ಣಾಂಶ ಕುಸಿದಿತ್ತು.ಉತ್ತರಪ್ರದೇಶದ ಕೆಲವು ಪಟ್ಟಣಗಳಲ್ಲಿ ದಟ್ಟ ಮಂಜಿನಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಪರಿಸ್ಥಿತಿ ಇನ್ನೂ 2 ದಿನ ಹೀಗೇ ಇರುವ ಸಂಭವವಿದೆ.
ಹಗುರ ಯುದ್ಧ ವಿಮಾನ ಹಾರಾಟ ಯಶಸ್ವಿ ಪ್ರಯೋಗ
ಬೆಂಗಳೂರು, ಜ. 4– ದೇಶದ ಮೊಟ್ಟಮೊದಲ ಅತ್ಯಾಧುನಿಕ ಮತ್ತು ಶರವೇಗದ ಹಗುರ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ಇಂದು ಬೆಳಿಗ್ಗೆ ನಗರದ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಸಮ್ಮುಖದಲ್ಲಿ ಈ ಮಹತ್ವದ ಪ್ರಯೋಗಾರ್ಥ ಹಾರಾಟ ನಡೆಯಿತು. 1983ರಲ್ಲಿ ರೂಪುಗೊಂಡ ಎಲ್‌ಸಿಎ ತಯಾರಿಕೆ ಯೋಜನೆ ಕಾರ್ಯಾರಂಭವಾಗಿದ್ದು, 1993ರಲ್ಲಿ.