ADVERTISEMENT

25 ವರ್ಷಗಳ ಹಿಂದೆ: ಬುಧವಾರ 10.7.1996

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 19:30 IST
Last Updated 9 ಜುಲೈ 2021, 19:30 IST
   

ವಂಚನೆ: ನರಸಿಂಹರಾವ್‌ಗೆ ಕೋರ್ಟ್ ಸಮನ್ಸ್‌
ನವದೆಹಲಿ, ಜುಲೈ 9 (ಪಿಟಿಐ):
ವಿವಾದಾತ್ಮಕ ಸಾಧು ಚಂದ್ರಸ್ವಾಮಿಯು ಅನಿವಾಸಿ ಭಾರತೀಯ ಉದ್ಯಮಿ ಲಕ್ಕೂ ಭಾಯಿ ಪಾಠಕ್‌ಗೆ ಒಂದು ಲಕ್ಷ ಡಾಲರ್ ವಂಚನೆ ನಡೆಸಿದ್ದಾನೆನ್ನಲಾದ ಪ್ರಕರಣದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ನ್ಯಾಯಾಧೀಶರ ಮುಂದೆ ಹಾಜರಾಗಬೇಕೆಂದು ಇಂದು ಸಮನ್ಸ್ ಹೊರಡಿಸಿದೆ.

ಭಾರತದಲ್ಲಿ ನ್ಯೂಸ್‌ಪ್ರಿಂಟ್ ಪೂರೈಕೆ ಮಾಡುವ ಕಾಂಟ್ರಾಕ್ಟ್ ಒಂದನ್ನು ಕೊಡಿಸುವುದಾಗಿ ತಮ್ಮನ್ನು ನಂಬಿಸಿ ತಮ್ಮಿಂದ ಒಂದು ಲಕ್ಷ ಡಾಲರ್ ಹಣ ವನ್ನು ಚಂದ್ರಸ್ವಾಮಿ ಮತ್ತು ಆತನ ಗೆಳೆಯ ಕೈಲಾಶನಾಥ್ ಅಗರ್‌ವಾಲ್ ಪಡೆದಿದ್ದರು. ಆಗ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ನರಸಿಂಹ ರಾವ್ ಅವರು ತಮಗೆ ಕಾಂಟ್ರಾಕ್ಟ್ ದೊರಕಿಸುವ ಬಗ್ಗೆ ಭರವಸೆ ನೀಡಿದ್ದರು ಎಂದು ಪಾಠಕ್ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT