ADVERTISEMENT

50 ವರ್ಷಗಳ ಹಿಂದೆ: ಗುರುವಾರ, 20–8–1970

ಕನ್ನಡಿಗರಿಗೆ ಮಹಾಜನ್‌ ವರದಿಯೊಂದೇ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 19:45 IST
Last Updated 19 ಆಗಸ್ಟ್ 2020, 19:45 IST
   

ಕನ್ನಡಿಗರಿಗೆ ಮಹಾಜನ್‌ ವರದಿಯೊಂದೇ ಒಪ್ಪಿಗೆ
ನವದೆಹಲಿ, ಆ. 19
– ಮೈಸೂರು– ಮಹಾರಾಷ್ಟ್ರ ಗಡಿ ವಿಷಯದಲ್ಲಿ ಮಹಾಜನ್‌ ಆಯೋಗದ ವರದಿಯನ್ನು ಕಾರ್ಯಗತಗೊಳಿಸಬೇಕೆಂದು ಮೈಸೂರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಇಂದು ಒತ್ತಾಯ ಸಲ್ಲಿಸಿ, ಬೇರಾವುದೇ ಮಾರ್ಗವು ತಮ್ಮ ರಾಜ್ಯದ ಜನತೆಗೆ ಸಮ್ಮತಾರ್ಹವಲ್ಲವೆಂದು ಸ್ಪಷ್ಟಪಡಿಸಿದರು.

ಆಡಳಿತ ಕಾಂಗ್ರೆಸ್‌ ಅಧ್ಯಕ್ಷಶ್ರೀ ಜಗಜೀವನರಾಂ ಅವರೂ ಹಾಜರಿದ್ದ ಶ್ರೀಮತಿ ಗಾಂಧಿಯವರ ಮುಂದೆ ‘ನಿಮಗೆಲ್ಲ ಚೆನ್ನಾಗಿ ಗೊತ್ತಿರುವ ನನ್ನ ವಾದ ಮಂಡಿಸಿದೆ’ ಎಂದು ಶ್ರೀ ಪಾಟೀಲರು ನಂತರ ಪತ್ರಕರ್ತರಿಗೆ ತಿಳಿಸಿದರು.

ವಿವಾದಗ್ರಸ್ತ ಪ್ರದೇಶಗಳಲ್ಲಿ ಜನಮತ ಸಂಗ್ರಹ, ಹೊಸ ನ್ಯಾಯಮಂಡಲಿ ನೇಮಕ, ನಿರ್ಧಾರಕ್ಕಾಗಿ ಸಂಸತ್ತಿಗೆ ವಿವಾದ ಒಪ್ಪಿಸುವುದೇ ಮೊದಲಾದ ಕೆಲವು ಸಲಹೆಗಳನ್ನು ಪ್ರಧಾನಿ ಮತ್ತು ರಕ್ಷಣಾ ಸಚಿವರು ಮೊದಲು ಪ್ರಸ್ತಾಪಿಸಿದರೆಂದು ಹೇಳಿದರು.

ADVERTISEMENT

ಶಸ್ತ್ರಾಸ್ತ್ರ ಉತ್ಪಾದನಾ ಮಂಡಲಿ ರಚನೆ ಪರಿಶೀಲನೆಯಲ್ಲಿ
ನವದೆಹಲಿ, ಆ. 19–
ಆರ್ಡ್‌ನೆನ್ಸ್‌ ಕಾರ್ಖಾನೆಗಳ ಆಡಳಿತ ಉತ್ತಮಪಡಿಸುವುದಕ್ಕಾಗಿ ಉನ್ನತ ಮಟ್ಟದ ಆರ್ಡ್‌ನೆನ್ಸ್‌ ಉತ್ಪಾದನಾ ಮಂಡಲಿಯೊಂದನ್ನು ರಚಿಸಬೇಕೆಂಬ ಸಲಹೆ ಸರ್ಕಾರದ ಪರಿಶೀಲನೆಯಲ್ಲಿದೆಯೆಂದು ಲೋಕಸಭೆಯಲ್ಲಿ ಇಂದು ರಕ್ಷಣಾ ಉತ್ಪಾದನಾ ಸಚಿವ ಪಿ.ಸಿ.ಸೇಠಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.