ADVERTISEMENT

50 ವರ್ಷಗಳ ಹಿಂದೆ | ದಕ್ಷಿಣ ಕನ್ನಡದಲ್ಲಿ 5,300 ಮನೆ ಕುಸಿತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 0:26 IST
Last Updated 1 ಆಗಸ್ಟ್ 2024, 0:26 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ದಕ್ಷಿಣ ಕನ್ನಡದಲ್ಲಿ 5,300 ಮನೆ ಕುಸಿತ

ಮಂಗಳೂರು, ಜುಲೈ 31– ಇತ್ತೀಚಿನ ಪ್ರವಾಹದಿಂದ ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿನ ಒಟ್ಟು 192 ಗ್ರಾಮಗಳಲ್ಲಿ 5,300 ಮನೆ, ಕಟ್ಟಡಗಳು ಕುಸಿದು 1.25 ಕೋಟಿ ರೂಪಾಯಿ ನಷ್ಟವಾಗಿದೆಯೆಂದು ಅಧಿಕಾರಿಗಳ ಪ್ರಾಥಮಿಕ ಅಂದಾಜಿನಿಂದ ತಿಳಿದುಬಂದಿದೆ.

ಶ್ರೀಸಾಮಾನ್ಯ ಮುಕ್ತ; ಮಧ್ಯಮ, ಮೇಲುವರ್ಗಗಳು ಭಾರಕ್ಕೆ ಬಲಿ

ADVERTISEMENT

ನವದೆಹಲಿ, ಜುಲೈ 31– ಜನಸಾಮಾನ್ಯರ ನಿತ್ಯಬಳಕೆ ವಸ್ತುಗಳಿಗೆ ವಿನಾಯಿತಿ ನೀಡಿರುವುದಾಗಿ ಹೇಳಿ ಅರ್ಥಸಚಿವ ವೈ.ಬಿ. ಚವಾಣರು ಇಂದು ಲೋಕಸಭೆಯಲ್ಲಿ ಮಂಡಿಸಿದ ಪೂರಕ ಆಯವ್ಯಯ ಮಧ್ಯಮ ವರ್ಗದ ಜನರ ಕರಭಾರವನ್ನು ಹೆಚ್ಚಿಸಿದೆ.

ಅತ್ಯುತ್ಕೃಷ್ಟ ಹಾಗೂ ಉತ್ಕೃಷ್ಟ ದರ್ಜೆಯ ಬಟ್ಟೆ, ಸಿಗರೇಟ್, ಸಿಮೆಂಟ್ ಮತ್ತು ಗೃಹ ನಿರ್ಮಾಣ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಚವಾಣರು ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ಜನರ ಮೇಲೆ ತೆರಿಗೆಯ ಪ್ರಹಾರ ನಡೆಸಿದ್ದಾರೆ.

ಉಪರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಸ್ಪರ್ಧಿ ಜತ್ತಿ

ನವದೆಹಲಿ, ಜುಲೈ 31– ಉಪರಾಷ್ಟ್ರಪತಿ ಸ್ಥಾನಕ್ಕೆ ಒರಿಸ್ಸಾ ರಾಜ್ಯಪಾಲ ಬಿ.ಡಿ. ಜತ್ತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ನಿಲ್ಲಿಸಬೇಕೆಂದು ಪಕ್ಷದ ಕೇಂದ್ರ ಸಂಸದೀಯ ಮಂಡಳಿಯು ಗುರುವಾರ ವಿಧ್ಯುಕ್ತವಾಗಿ ನಿರ್ಧರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.