ನವದೆಹಲಿ, ಮೇ 17– ರೈಲು ಮುಷ್ಕರದ ಹತ್ತನೇ ದಿನವಾದ ಇಂದು ಕೂಡ ಸಂಧಾನದಿಂದ ಮುಷ್ಕರ ಮುಕ್ತಾಯಗೊಳ್ಳುವ ಯಾವುದೇ ಸೂಚನೆಯೂ ಕಂಡುಬರಲಿಲ್ಲ.
ಮುಷ್ಕರ ರದ್ದುಪಡಿಸದೆಯೇ ರೈಲು ಕಾರ್ಮಿಕ ನಾಯಕರ ಜೊತೆ ಸಂಧಾನ ಸಾಧ್ಯವೇ ಇಲ್ಲ ಎಂಬ ನೀತಿಯನ್ನು ಸರ್ಕಾರ ಇಂದು ಮತ್ತೆ ಸಾರಿ ಹೇಳಿತು.
ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಂಪುಟದ ರಾಜಕೀಯ ವ್ಯವಹಾರ ಸಮಿತಿ ಸಭೆಯಲ್ಲಿ ಇಂದು ನಡೆಸಿದ ದೀರ್ಘ ಚರ್ಚೆ ನಂತರ ಸರ್ಕಾರದ ಹಿಂದಿನ ದೃಢ ನಿರ್ಧಾರವನ್ನು ಮತ್ತೆ ಸ್ಪಷ್ಟಪಡಿಸಲಾಯಿತು.
ಬೆಂಗಳೂರು, ಮೇ 17– ರಾಜ್ಯದಲ್ಲಿ ಸಿಮೆಂಟ್ ಕೊರತೆ ಇನ್ನೂ ಎರಡು–ಮೂರು ತಿಂಗಳು ಮುಂದುವರಿಯುವುದೆಂದು ಕೈಗಾರಿಕೆ ಸಚಿವ ಎಸ್.ಎಂ. ಕೃಷ್ಣ ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು.
ಟಿ.ಆರ್. ಶಾಮಣ್ಣ ಅವರ ಗಮನ ಸೆಳೆಯುವ ಸೂಚನೆಗೆ ಹೇಳಿಕೆ ನೀಡಿದ ಅವರು, ದೊರೆಯುವ ಸಿಮೆಂಟನ್ನು ಸಮಾನವಾಗಿ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗೊತ್ತಾದ ದರಗಳಿಗಿಂತ ಹೆಚ್ಚಿನ ದರಕ್ಕೆ ಸಿಮೆಂಟನ್ನು ಮಾರುತ್ತಿದ್ದ 96 ಮಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಅವರಲ್ಲಿ 46 ಮಂದಿಗೆ ಶಿಕ್ಷೆಯಾಗಿದೆ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.