75 ವರ್ಷಗಳ ಹಿಂದೆ
ಮದರಾಸ್, ಜುಲೈ 9– ರಕ್ತಪಾತವಿಲ್ಲದೆ ಸಂಪೂರ್ಣ ಸೌಖ್ಯದ ಗುರಿಯನ್ನು ಮುಟ್ಟಬೇಕಾದರೆ ಭಾರತದ ಜನರು, ಅದರಲ್ಲೂ ಯುವಕರು ‘ಕಮ್ಯುನಿಸಂ’ ಅನ್ನು ತಿರಸ್ಕರಿಸಬೇಕೆಂದು, ಭಾರತ ಸೋಷಲಿಸ್ಟ್ ಪಕ್ಷದ ಮಹಾ ಕಾರ್ಯದರ್ಶಿ ಶ್ರೀ ಜೈ ಪ್ರಕಾಶ್ ನಾರಾಯಣರು ಇಂದು ಕರೆ ಇತ್ತರು. ತಮ್ಮ ಎರಡೂವರೆ ಗಂಟೆ ಕಾಲದ ಭಾಷಣದಲ್ಲಿ ರಾಷ್ಟ್ರೀಯ ಪುನರು ಜ್ಜೀವನಕ್ಕಾಗಿ ಸೋಷಲಿಸ್ಟರು ಮುಂದಿಟ್ಟಿರುವ 18 ಅಂಶಗಳ ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು.
ಜೋಧಪುರ, ಜುಲೈ 9– ಷಾಹ್‌ಪುರದ ಗೇಣಿದಾರನಿಂದ ಬಂದ ಫಿರ್ಯಾದಿನ ರೀತ್ಯಾ ಷಾಹ್‌ಪುರದ ರಾಜಮಾತೆಗೆ, ರಾಜಸ್ಥಾನ ಹೈಕೋರ್ಟಿನವರು ಸಮನ್ಸ್‌ಗಳನ್ನು ಜಾರಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.