
ಪ್ರಜಾವಾಣಿ ವಿಶೇಷ
75 ವರ್ಷಗಳ ಹಿಂದೆ ಈ ದಿನ
ನೆಹರು ಸಂಧಿಸಲು ಲಂಡನ್‌ಗೆ ಬಿ.ಎನ್. ರಾವ್
ಲಂಡನ್, ಜ. 7– ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಬಿ.ಎನ್. ರಾವ್‌ರವರು ಪಂಡಿತ ನೆಹರುರವರನ್ನು ಸಂಧಿಸಲು ಸದ್ಯದಲ್ಲೇ ಲಂಡನ್‌ಗೆ ಬರಲಿರುವರೆಂಬ ಲೇಕ್ ಸಕ್ಸೆಸ್ ವರದಿಯು, ರಾವ್
ರವರು ಭಾರತ ಪ್ರಧಾನಿಯೊಂದಿಗೆ ಕೊರಿಯದಲ್ಲಿ ಯುದ್ಧ ಸ್ತಂಭನ ಮತ್ತು ಚೀನಾದೊಂದಿಗೆ ಪೌರಾತ್ಯ ಸಮಸ್ಯೆಗಳ ಬಗ್ಗೆ, ಹೊಸ ಯೋಜನೆಗಳ ಬಗ್ಗೆ ಚರ್ಚಿಸಬಹುದೆಂಬ ವದಂತಿಗೆ ಕಾರಣವಾಗಿದೆ.
ಪಂಡಿತ ನೆಹರುರವರು, ಕಾಮನ್‌ವೆಲ್ತ್ ರಾಷ್ಟ್ರಗಳೆಲ್ಲ ಒಂದೇರೀತಿಯ ಧೋರಣೆ ಅನುಸರಿಸ
ಬೇಕೆಂದು ಒತ್ತಾಯಪಡಿಸಬಹುದೆಂದೂ ಅಧಿಕೃತ ವಲಯಗಳಿಂದ ತಿಳಿದುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.