
75 ವರ್ಷಗಳ ಹಿಂದೆ ಈ ದಿನ
‘ಪ್ರಯೋಗ ಶಾಲೆಗಳು ಪ್ರಗತಿಯ ಆಧಾರಸ್ತಂಭ’
ಜಂಷೆಡ್‌ಪುರ, ನ. 27– ಪ್ರಧಾನಿ ಪಂಡಿತ ನೆಹರುರವರು ಇಂದು ಇಲ್ಲಿನ ರಾಷ್ಟ್ರೀಯ ಲೋಹ ಕೈಗಾರಿಕಾ ಪ್ರಯೋಗಶಾಲೆಯನ್ನು ಉದ್ಘಾಟಿಸುತ್ತ, ನಾಡಿನ ಅಭಿವೃದ್ಧಿಯಲ್ಲಿ ವೈಜ್ಞಾನಿಕ ಸಂಶೋಧನೆಯ ಮಹತ್ವ ಕುರಿತು ಮಾತನಾಡಿದರು.
ಕೈಗಾರಿಕೆಗಳಿಗೆ ವಿಜ್ಞಾನವನ್ನು ಅಳವಡಿಸುವುದು ಇಂದಿನ ಭಾರತಕ್ಕೆ ಅತ್ಯಂತ ಮಹತ್ವ ಪೂರಿತವಾದುದೆಂದೂ, ಇದರಿಂದ ಜನತೆಯ ಜೀವನ ಸ್ಥಿತಿ ಉತ್ತಮಗೊಳ್ಳುತ್ತದೆಂದೂ, ರಾಷ್ಟ್ರೀಯ ಲೋಹ ಕೈಗಾರಿಕಾ ಪ್ರಯೋಗಶಾಲೆಯು ಈ ಮಹತ್ವವನ್ನು ಹೆಚ್ಚಿನ ಮಟ್ಟಕ್ಕೆ ಪ್ರತಿನಿಧಿಸುವುದೆಂದೂ ತಿಳಿಸಿದರು.
ತ್ರಿವೇಣಿ ನಗರ ಕ್ರಾಂತಿಕಾರರ ವಶ
ಪಾಟ್ನಾ, ನ. 27– ಬೀರ್‌ಗಂಜ್ ಕ್ಷೇತ್ರದಲ್ಲಿರುವ ನೇಪಾಳಿ ಕಾಂಗ್ರೆಸ್ ಸ್ವಯಂಸೇವಕರು ಗಂಡಕಿ ನದಿತೀರದ ತ್ರಿವೇಣಿ ನಗರವನ್ನು ನಿನ್ನೆ ವಶಪಡಿಸಿಕೊಂಡರೆಂದು, ನೇಪಾಳಿ ಕಾಂಗ್ರೆಸ್ ವಲಯಗಳಿಂದ ಗೊತ್ತಾಗಿದೆ.
ಕ್ರಾಂತಿಕಾರರ ಸೇನೆಗಳಿಗೆ ಹೆಚ್ಚು ವಿರೋಧವಿರಲಿಲ್ಲ. ಎರಡು ಪಕ್ಷಗಳಲ್ಲೂ ಹೆಚ್ಚು ಸಾವು–ನೋವುಗಳಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.