
ಪ್ರಜಾವಾಣಿ ವಾರ್ತೆಕೊಯಮತ್ತೂರು, ಡಿ.13– ಮದರಾಸಿನಿಂದ ತಿರುವನಂತಪುರಕ್ಕೆ ಹೊರಟ ಏರ್ ಇಂಡಿಯಾ ವಿಮಾನವೊಂದು ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 10–20ಕ್ಕೆ ಕೊಯಮತ್ತೂರಿಗೆ ಬರಬೇಕಾಗಿದ್ದುದು ಇನ್ನೂ ಪತ್ತೆಯಾಗಿಲ್ಲವಾಗಿದೆ.
ವಿಮಾನದಲ್ಲಿ 16 ಮಂದಿ ಪ್ರಯಾಣಿಕರೂ, ನಾಲ್ವರು ಚಾಲಕ ವರ್ಗದವರೂ ಇದ್ದರು. ಎಂಟು ಸಾವಿರ ಅಡಿಗಳ ನೀಲಗಿರಿ ಬೆಟ್ಟ ಪ್ರದೇಶದಲ್ಲಿ ಮೋಡಗಳು ದಟ್ಟವಾಗಿದ್ದು ಸ್ಪಷ್ಟವಾಗಿ ಕಾಣದೆ, ವಿಮಾನಯಾನ ಅಪಾಯಕರವಾಗಿ, ನಾಪತ್ತೆಯಾದ ಡಕೋಟವನ್ನು ಕಂಡು ಹಿಡಿಯುವ ಪ್ರಯತ್ನ ವಿಫಲವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.