ADVERTISEMENT

75 ವರ್ಷಗಳ ಹಿಂದೆ | ಶ್ರೀನಗರದ ದಾರಿಯಲ್ಲಿ ವಿಮಾನ ಅಪಘಾತ: 22 ಮಂದಿ ಮರಣ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 0:30 IST
Last Updated 18 ಜುಲೈ 2025, 0:30 IST
<div class="paragraphs"><p>75 ವರ್ಷಗಳ ಹಿಂದೆ</p></div>

75 ವರ್ಷಗಳ ಹಿಂದೆ

   

ಶ್ರೀನಗರದ ದಾರಿಯಲ್ಲಿ ವಿಮಾನ ಅಪಘಾತ: 22 ಮಂದಿ ಮರಣ

ದೆಹಲಿ, ಜುಲೈ 17– ದೆಹಲಿಯಿಂದ ಶ್ರೀನಗರಕ್ಕೆ ಹಾರಾಟ ಕೈಗೊಂಡಿದ್ದ ನ್ಯಾಷನಲ್ ಏರ್‌ವೇಸ್‌ಗೆ ಸೇರಿದ ಡಕೋಟ ವಿಮಾನವೊಂದು ಶ್ರೀನಗರಕ್ಕೆ ಹೋಗುವಾಗಲೇ ಅಪಘಾತಕ್ಕೀಡಾಗಿ, ಭಾರತದಲ್ಲಿನ ಆಸ್ಟ್ರಿಯಾ ಪ್ರತಿನಿಧಿ – ವಿಶ್ವಸಂಸ್ಥೆಯ ಕಾಶ್ಮೀರ ಪರಿಶೀಲಕರು ಮತ್ತು ಪ್ರಧಾನಿ ನೆಹರೂ ಆಪ್ತ ಕಾರ್ಯದರ್ಶಿ ದ್ವಾರಕ್ಯಾಥ ಕಟ್ಟು ಅವರನ್ನೊಳಗೊಂಡು 18 ಮಂದಿ ಪ್ರಯಾಣಿಕರೂ, 4 ಮಂದಿ ವಿಮಾನ ಚಾಲಕ ಪಡೆಯವರು ಮೃತ್ಯುವಿಗೆ ಈಡಾದರು.

ADVERTISEMENT

ಮೈಸೂರು ಶಾಸನ ಸಭೆಗೆ ಉಪ ಚುನಾವಣೆ

ಬೆಂಗಳೂರು, ಜುಲೈ 17– ಮೈಸೂರು ಶಾಸನ ಸಭೆಯಲ್ಲಿ ಖಾಲಿ ಇರುವ ಸ್ಥಾನಗಳಲ್ಲಿ, ಎರಡು ಸ್ಥಾನಗಳಿಗೆ ಸರ್ಕಾರ ಉಪ ಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.