75 ವರ್ಷಗಳ ಹಿಂದೆ
ಲಂಡನ್, ಸೆಪ್ಟೆಂಬರ್ 5– ಕಾಮನ್‌ವೆಲ್ತ್ ರಾಷ್ಟ್ರಗಳ ತಾಂತ್ರಿಕ ಸಮಿತಿಗಳ ಅನೌಪಚಾರಿಕ ಸಭೆಯು ಇಂದು ರಾತ್ರಿ ಇಲ್ಲಿ ನಡೆಯಿತು.
ದಕ್ಷಿಣ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಆರ್ಥಿಕ ನೆರವಿನ ಯೋಜನೆ ರೂಪಿಸುವ ಬಗ್ಗೆ ಚರ್ಚಿಸ
ಲಾಯಿತು. ಗುರುವಾರದಿಂದ ಆರಂಭ ಆಗಲಿರುವ ಕಾಮನ್‌ವೆಲ್ತ್ ರಾಷ್ಟ್ರಗಳ ಸಭೆಯಲ್ಲಿ ಈ ಕುರಿತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
ಭೂಕಂಪ ಸಂತ್ರಸ್ತರ ನೆರವಿಗೆ ಬದ್ಧ: ನೆಹರೂ
ದಿಬ್ರುಗಢ, ಸೆಪ್ಟೆಂಬರ್ 5– ಭೂಕಂಪನದಿಂದ ತತ್ತರಿಸಿರುವ ಅಸ್ಸಾಂಗೆ ಭೇಟಿ ನೀಡಿರುವ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು, ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.