
ಪ್ರಜಾವಾಣಿ ವಿಶೇಷವಾಷಿಂಗ್ಟನ್, ಜ. 15– ಅಮೆರಿಕಾಧ್ಯಕ್ಷ ಟ್ರೂಮನ್ನರು 71,594 ದಶಲಕ್ಷ ಡಾಲರುಗಳ ಆಯವ್ಯಯ ಅಂದಾಜನ್ನು ಕಾಂಗ್ರೆಸ್ ಅಧಿವೇಶನದಲ್ಲಿ ಈ ದಿನಮಂಡಿಸಿದರು. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸೈನ್ಯಬಲವನ್ನು 41,421 ದಶಲಕ್ಷ ಮತ್ತು ತಮ್ಮ ಮಿತ್ರ ರಾಷ್ಟ್ರಗಳವರ ಸೇನಾಬಲ ವರ್ಧನಕ್ಕೆ 7,112 ದಶಲಕ್ಷ ಡಾಲರುಗಳನ್ನು ಒದಗಿಸಬೇಕೆಂದು ಅಂದಾಜಿನಲ್ಲಿ ಕೋರಲಾಗಿದೆ.
ಮುಂಬೈ, ಜ. 15– ಕೇಂದ್ರ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್ ಇಂದು ಚಿತ್ರವೊಂದನ್ನು ವಿಮರ್ಶಿಸಿ ತನ್ನ ಕೆಲಸ ಆರಂಭಿಸಿತು. ಇತ್ತ ಮೈಸೂರು ಸಂಸ್ಥಾನದ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್ ಇಂದಿನಿಂದ ರದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.