ADVERTISEMENT

25 ವರ್ಷಗಳ ಹಿಂದೆ | ಕಾಲೇಜು ಅನುದಾನ: ಇಂದು ಹೊಸ ಆದೇಶ ಜಾರಿಗೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 23:30 IST
Last Updated 23 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಕಾಲೇಜು ಅನುದಾನ: ಇಂದು ಹೊಸ ಆದೇಶ ಜಾರಿಗೆ

ಬೆಂಗಳೂರು, ಫೆ. 23– ಅನುದಾನಿತ ಕಾಲೇಜುಗಳಿಗೆ ಶೇ 15ರಷ್ಟು ಅನುದಾನ ಕಡಿತ ಮಾಡಿ ಈ ತಿಂಗಳ 13ರಂದು ಹೊರಡಿಸಿದ್ದ ಆದೇಶವನ್ನು, ಅಧ್ಯಾಪಕರ ಸಂಬಳಕ್ಕೆ ಸ್ವಲ್ಪವೂ ಧಕ್ಕೆ ಆಗದಂತೆ ಸರ್ಕಾರ ಪರಿಷ್ಕರಣೆ ಮಾಡಿದೆ. ಅಧ್ಯಾಪಕರು ಹಿಂದಿನಂತೆ ಪೂರ್ಣ ಸಂಬಳವನ್ನು ಪಡೆಯಲಿದ್ದಾರೆ.

ಅಧ್ಯಾಪಕರ ಸಂಬಳದಲ್ಲಿ ಕಡಿತ ಆಗದಂತೆ ಆದೇಶ ತಿದ್ದುಪಡಿ ಮಾಡಿ ನಾಳೆ ಅಧಿಕೃತ ಆದೇಶ ಹೊರಡಿಸ ಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ ಅವರು
ತಿಳಿಸಿದರು.

ವಾರಾಹಿ ಯೋಜನೆಗೆ ಪರಿಸರ ಅನುಮತಿ

ನವದೆಹಲಿ, ಫೆ. 23– ವಾರಾಹಿ ನೀರಾವರಿ ಯೋಜನೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವಾಲಯವು ಪರಿಸರ ಸಂಬಂಧಿ ಅನುಮತಿ ನೀಡುವುದು ಬಹುತೇಕ ಖಚಿತವಾಗಿದ್ದು, ಇದರಿಂದಾಗಿ 21 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಕೊನೆಗೂ ಕಾರ್ಯಗತ ಗೊಳ್ಳುವ ಹಾದಿಯಲ್ಲಿ ಸಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.