
ಪ್ರಜಾವಾಣಿ ವಿಶೇಷಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಆಯ್ಕೆ
ಅಹಮದಾಬಾದ್, ಫೆ. 1– ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಇಂದು ಪ್ರಧಾನಿ ಪಂಡಿತ ನೆಹರೂರವರ ‘ಸಂಘಟನಾ ನಿರ್ಣಯ’, ಚಂದಾ ಸದಸ್ಯತ್ವವನ್ನು ಪುನಃ ಜಾರಿಗೆ ತರುವ ಅಂಗರಚನೆಯ ಕರಡು, ಹಾಗೂ ವನಸ್ಪತಿಯನ್ನು ನಿಷೇಧಿಸಬೇಕೆನ್ನುವ ಅನಧಿಕೃತ ನಿರ್ಣಯ ಇವೆಲ್ಲವನ್ನೂ ಅಂಗೀಕರಿಸಿ ಅನಿರ್ದಿಷ್ಟಕಾಲದವರೆಗೆ ಮುಂದುವರಿಯಿತು.
ಸಿಂಹಳದಲ್ಲಿರುವ ಭಾರತೀಯರ ಬಗ್ಗೆ ನಿರ್ಣಯವೊಂದರ ಮೇಲೆ ಮಾತನಾಡುತ್ತಾ, ಭಾರತೀಯರ ಪ್ರಶ್ನೆಯನ್ನು ಸ್ನೇಹ ಮಾರ್ಗದಿಂದ ಪರಿಹರಿಸಬೇಕೆಂದು ನೆಹರೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.