
ಪ್ರಜಾವಾಣಿ ವಿಶೇಷ
ಬೆಂಗಳೂರು, ನ.15– ಕಳೆದ ನೂರ ಏಳು ದಿನಗಳಿಂದ ಕಾಡುಗಳ್ಳ ವೀರಪ್ಪನ್ ಒತ್ತೆಯಾಳಾಗಿದ್ದ ನಾಲ್ಕು ಕೋಟಿ ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜ್‌ಕುಮಾರ್ ಅವರು ಮಂಗಳವಾರ ಮಧ್ಯರಾತ್ರಿ ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ. ಅವರೊಂದಿಗೆ ಒತ್ತೆಯಾಳುಗಳಾಗಿದ್ದ ನಾಗೇಶ್ ಕೂಡ ಬಂಧಮುಕ್ತಿಗೊಂಡಿದ್ದಾರೆ.
ರಾಜ್ ಬಿಡುಗಡೆಯಿಂದ ರಾಜ್ಯಾದ್ಯಾಂತ ಹೇಳತೀರದ ಸಂಭ್ರಮ ಮೂಡಿದ್ದು, ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಜುಲೈ 30ರಂದು ರಾತ್ರಿ ಪ್ರಾರಂಭವಾದ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.