
ಕೊಪ್ಪಳ, ಅ. 30– ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡುವ ವಿಚಾರದಲ್ಲಿ ರೈತರು ಹಾಗೂ ಅಧಿಕಾರಿಗಳ ನಡುವೆ ನಡೆದ ಮಾತುಕತೆ ವಿಫಲಗೊಂಡಾಗ ರೊಚ್ಚಿಗೆದ್ದು, ಸರ್ಕಾರಿ ಜೀಪಿಗೆ ಬೆಂಕಿ ಇಟ್ಟು ದಾಖಲೆ ಸುಟ್ಟ ಭಾರೀ ಸಂಖ್ಯೆಯ ರೈತರನ್ನು ನಿಯಂತ್ರಿಸುವು ದಕ್ಕಾಗಿ ಪೊಲೀಸರು ಇಲ್ಲಿ ಇಂದು ಲಾಠಿ ಪ್ರಹಾರ ಮಾಡಿ ಅಶ್ರುವಾಯು ಪ್ರಯೋಗಿಸಿದರು.
ಸರ್ಕಾರದ ನೀತಿ ವಿರುದ್ಧ ಆಕ್ರೋಶ ತಾಳಿದ ರೈತರು, ತಹಶೀಲ್ದಾರ್ ಜೀಪಿಗೆ ಬೆಂಕಿ ಹಚ್ಚಿ ಅದನ್ನು ಭಸ್ಮ ಮಾಡಿದ್ದೇ ಅಲ್ಲದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ದಾಖಲೆ, ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ನಾಶಗೊಳಿಸಿದಾಗ ಪೊಲೀಸರು ನಿಯಂತ್ರಣ ಕ್ರಮವಾಗಿ ಲಾಠಿ, ಅಶ್ರುವಾಯುವಿನಂಥ ಬಲಪ್ರಯೋಗ ಮಾಡಿದರು.
ಕ್ರಿಕೆಟ್ ಮೋಸದಾಟ: ಸಿಬಿಐನಿಂದ ವರದಿ ಸಲ್ಲಿಕೆ
ನವದೆಹಲಿ, ಅ. 30– ಕ್ರಿಕೆಟ್‌ನಲ್ಲಿನ ಮೋಸದಾಟ ಕುರಿತು ಆರು ತಿಂಗಳ ಕಾಲ ವಿಚಾರಣೆ ನಡೆಸಿದ ಕೇಂದ್ರೀಯ ತನಿಖಾ ಆಯೋಗವು (ಸಿಬಿಐ), ತನ್ನ ವರದಿಯನ್ನು ಇಂದು ಕೇಂದ್ರ ಕ್ರೀಡಾ ಸಚಿವ ಸುಖದೇವ್ ಧಿಂಡ್ಸಾ ಅವರಿಗೆ ಸಲ್ಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.