
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಬೆಂಗಳೂರು, ಡಿ. 21– ತಾರೀಕು 21ರಲ್ಲಿ ಪ್ರಕಟಿಸಿದ ಮತದಾರರು ಓಟು ಮಾಡುವ ವಿಧಾನದ ಕರೆಯ ಹಿಂದಿನ ಪ್ಯಾರಾದಲ್ಲಿ ಹೇಳಿರುವಂತೆ ಅನಕ್ಷರಸ್ಥರು ಮಾತ್ರ ಬೆರಳಿನ ಗುರ್ತನ್ನು ಪೋಲಿಂಗ್ ಆಫೀಸರರ ಮುಂದೆ ಹಾಕಿ ಬ್ಯಾಲೆಟ್ ಪೇಪರನ್ನು ಪಡೆದು ಓಟು ಮಾಡಬೇಕಾಗಿ ವಿನಂತಿ ಎಂದು ಕಾರ್ಪೋರೇಷನ್ ಕಮಿಷನರ್ ತಿಳಿಸಿರುತ್ತಾರೆ.
ಗುಂಡಿಟ್ಟು ಕೊಲ್ಲುವುದನ್ನು ನಿಲ್ಲಿಸಲಾಗಿದೆ
ಸಿಯೋಲ್, ಡಿ. 21– ದಕ್ಷಿಣ ಕೊರಿಯ ಸರ್ಕಾರವು ರಾಜಕೀಯ ಕೈದಿಗಳನ್ನೂ, ತಪ್ಪಿತಸ್ಥರನ್ನು ಗುಂಡಿಟ್ಟು ಕೊಲ್ಲುವುದನ್ನು ನಿಲ್ಲಿಸಿರುವುದಾಗಿ ಇಂದು ಪ್ರಕಟಣೆ ಹೊರಡಿಸಿದೆ.
ಮರಣ ದಂಡನೆ ಜಾರಿಗೊಳಿಸುತ್ತಿರುವ ರೀತಿಯು ಕ್ರೂರ ಮತ್ತು ಅಮಾನುಷವೇ ಎಂಬ ವಿಚಾರದಲ್ಲಿ ತನಿಖೆ ಆಗುತ್ತಿದೆ ಎಂದು ಕೊರಿಯಾ ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.