
ಬೆಂಗಳೂರು, ಜ. 18– ರಾಷ್ಟ್ರದ ಪ್ರತಿಷ್ಠಿತ ಇನ್‌ಫೋಸಿಸ್ ಸಂಸ್ಥೆ ತನ್ನ ಸಮುದಾಯದ ಅತ್ಯಂತ ದೊಡ್ಡ ಸಾಫ್ಟ್‌ವೇರ್ ಸಂಕೀರ್ಣವನ್ನು ಸುಮಾರು 619 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಸ್ಥಾಪಿಸಲಿದೆ.
ಇನ್‌ಫೋಸಿಸ್ ಸಂಸ್ಥೆಯ ಈ ಕೇಂದ್ರ ವಿಶ್ವದಲ್ಲಿಯೇ ದೊಡ್ಡದೆಂದು ಹೇಳಲಾಗಿದೆ. ಈ ಯೋಜನೆ ಸೇರಿದಂತೆ ಒಟ್ಟು 4,501 ಕೋಟಿ ರೂಪಾಯಿ ಬಂಡವಾಳದ ಐದು ಯೋಜನೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಈ ಯೋಜನೆಗಳು ಒಟ್ಟು 20,326 ಮಂದಿಗೆ ಉದ್ಯೋಗ ಒದಗಿಸುತ್ತವೆ ಎಂದು ಭಾರಿ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರು, ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್‌ಫೋಸಿಸ್ ಸಂಸ್ಥೆ ಸ್ಥಾಪಿಸುವ ಈ ಕೇಂದ್ರದಲ್ಲಿ 7,000 ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಒಂದೇ ಸೂರಿನಡಿ ಉದ್ಯೋಗ ಒದಗಿಸಲಿದೆ ಎಂದರು.
ಭರತ್ ಷಾ 22ರವರೆಗೆ ಪೊಲೀಸ್ ವಶಕ್ಕೆ
ಮುಂಬೈ, ಜ. 18 (ಯುಎನ್‌ಐ)– ಭೂಗತ ಜಗತ್ತಿನೊಂದಿಗೆ ಅಕ್ರಮ ವ್ಯವಹಾರ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚಿತ್ರೋದ್ಯಮದ ಲೇವಾದೇವಿಗಾರ ಭರತ್ ಷಾ ಜಾಮೀನು ಅರ್ಜಿಯನ್ನು ಮುಂಬೈ ಹೈಕೋರ್ಟ್ ತಿರಸ್ಕರಿಸಿತು.
ಇದಕ್ಕೆ ಸಂಬಂಧಿಸಿದ ಬೆಳವಣಿಗೆಯಲ್ಲಿ ವಿಶೇಷ ನ್ಯಾಯಾಲಯವೊಂದು ಭರತ್ ಷಾ ಅವರನ್ನು ಜನವರಿ 22ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.