ADVERTISEMENT

25 ವರ್ಷಗಳ ಹಿಂದೆ: ವಿದ್ಯುತ್‌ ಕಾಯ್ದೆಗೆ ಶೀಘ್ರ ತಿದ್ದುಪಡಿ

2001ರ ಮಾರ್ಚ್‌2, ಶುಕ್ರವಾರ

ಪ್ರಜಾವಾಣಿ ವಿಶೇಷ
Published 2 ಮಾರ್ಚ್ 2026, 0:18 IST
Last Updated 2 ಮಾರ್ಚ್ 2026, 0:18 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಪ್ರಾದೇಶಿಕ ಅಸಮಾನತೆ: ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ

ನವದೆಹಲಿ, ಮಾ. 1– ಪ್ರಾದೇಶಿಕ ಅಸಮಾನತೆ ಎನ್ನುವುದು ಕೇವಲ ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಪ್ರಾದೇಶಿಕ ಅಸಮಾನತೆ ಅಧ್ಯಯನಕ್ಕೆ ರಚಿಸಲಾಗಿದ್ದ ಆಯೋಗದ ಅಧ್ಯಕ್ಷ ಮತ್ತು ಆರ್ಥಿಕ ತಜ್ಞ ಡಾ. ಡಿ.ಎಂ. ನಂಜುಂಡಪ್ಪ ಅವರು ಹೇಳಿದ್ದಾರೆ.

ಆಯೋಗ ನಿನ್ನೆ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಅವರಿಗೆ ನೀಡಿದೆ. ಬಜೆಟ್‌ ಮಂಡನೆಗೆ ಒಂದು ತಿಂಗಳು ಇರುವಾಗಲೇ ಈ ವರದಿ ನೀಡಿರುವುದರಿಂದ ರಾಜ್ಯ ಸರ್ಕಾರ ಬಜೆಟ್‌ ಮಂಡಿಸುವಾಗ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಕ್ರಮಕೈಗೊಳ್ಳಬಹುದಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

_____________

ವಿದ್ಯುತ್‌ ಕಾಯ್ದೆಗೆ ಶೀಘ್ರ ತಿದ್ದುಪಡಿ

ಬೆಂಗಳೂರು, ಮಾ. 1– ವಿದ್ಯುತ್‌ ಕಳ್ಳತನವನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಲು ನಿರ್ಧರಿಸಿರುವ ಸರ್ಕಾರ, ಕರ್ನಾಟಕ ವಿದ್ಯುತ್‌ ಕಾಯ್ದೆಗೆ ಸದ್ಯದಲ್ಲೇ ಸೂಕ್ತ ತಿದ್ದುಪಡಿ ತರಲಿದೆ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ಪ್ರಶ್ನೆಯ ಮೇಲೆ ನಡೆದ ಚರ್ಚೆಗೆ ಅವರು ಉತ್ತರಿಸಿದರು. ವಿದ್ಯುತ್‌ ಕಳವು ಮತ್ತು ನಟ ಸಂಜಯ್‌ಖಾನ್‌ ಅವರಿಂದ ಆಗಿರುವ ವಿದ್ಯುತ್‌ ದುರುಪಯೋಗದ ಬಗ್ಗೆ ಸದಸ್ಯರು ಪ್ರಶ್ನೆ ಕಳುಹಿಸಿದ್ದರು. ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ‘ಮುಖ್ಯಮಂತ್ರಿ’ ಚಂದ್ರು ಪ್ರಶ್ನೆ ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.