ADVERTISEMENT

25 ವರ್ಷಗಳ ಹಿಂದೆ: ಗುರುವಾರ, ಆಗಸ್ಟ್‌ 24, 1995

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 19:30 IST
Last Updated 23 ಆಗಸ್ಟ್ 2020, 19:30 IST
   

ಕ್ಷಮೆ; ಹಕ್ಕುಚ್ಯುತಿ ಪ್ರಕರಣಕ್ಕೆ ತೆರೆ

ಬೆಂಗಳೂರು, ಆ. 23– ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸಭಾಧ್ಯಕ್ಷರು, ಸದನ ಹಾಗೂ ಎಲ್ಲ ಸದಸ್ಯರ ಬಗ್ಗೆ ಗೌರವ ಹೊಂದಿರುವುದಾಗಿ ಸ್ಪಷ್ಟಪಡಿಸಿ, ತಾವು ಆಡಿರುವ ಮನ ನೋಯಿಸುವಂತಹ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿರುವುದರಿಂದ ಅವರ ವಿರುದ್ಧದ ಹಕ್ಕುಚ್ಯುತಿ ನಿರ್ಣಯ ವಿಚಾರ ಬೆಳೆಸುವುದು ಸೂಕ್ತ ಅಲ್ಲ ಎಂದು ಸಭಾಧ್ಯಕ್ಷ ರಮೇಶ್‌ ಕುಮಾರ್‌ ಸದನದಲ್ಲಿ ಇಂದು ತೀರ್ಪು ನೀಡಿದರು.

ಸಭಾಧ್ಯಕ್ಷರ ಸ್ಥಾನಕ್ಕೆ, ತನ್ಮೂಲಕ ಸದನದ ಹಕ್ಕಿಗೆ ಮತ್ತು ಸದನದ ಗೌರವದ ಬಗ್ಗೆ ಚ್ಯುತಿ ಬರುವಂತಹ ಮಾತನಾಡಿದ್ದಾರೆ. ಅಲ್ಲದೆ ಸದನದಲ್ಲಿ ಸಮಾತಘಾತುಕ ಶಕ್ತಿಗಳಿಗೆ ರಕ್ಷಣೆ ಕೊಡತಕ್ಕಂತವರು ಇದ್ದಾರೆ ಎಂಬ ಅರ್ಥ ಬರುವಂತೆ ಮಾತನಾಡಿರುವರೆಂದು ವಿರೋಧ ಪಕ್ಷದ ನಾಯಕರ ವಿರುದ್ಧದ ಹಕ್ಕುಚ್ಯುತಿ ನಿರ್ಣಯದ ನಾಲ್ಕು ಸೂಚನೆಗಳಲ್ಲಿ ಪ್ರಸ್ತಾಪಿಸಿರುವುದನ್ನೂ ಅವರು ತೀರ್ಪಿನಲ್ಲಿ ಉಲ್ಲೇಖಿಸಿದರು.

ADVERTISEMENT

ಗ್ರಾನೈಟ್ ನಕಲಿ ಲೈಸೆನ್ಸ್ ಪ್ರಕರಣ: ಗಣಿ ಸಚಿವರ ರಾಜೀನಾಮೆಗೆ ಪಟ್ಟು

ಬೆಂಗಳೂರು, ಆ. 23– ನಕಲಿ ಲೈಸೆನ್ಸ್ ಪ್ರಕರಣ ಸೇರಿದಂತೆ ಗ್ರಾನೈಟ್ ವ್ಯವಹಾರವನ್ನು ಒಳಗೊಂಡ ಎಲ್ಲ ಹಗರಣಗಳ ತನಿಖೆ ಮತ್ತು ಅದು ಮುಗಿಯುವವರೆಗೆ ಗಣಿ ಸಚಿವ ಎಸ್‌.ಡಿ. ಜಯರಾಂ ಅವರ ರಾಜೀನಾಮೆಗೆ ಪಟ್ಟು ಹಿಡಿದ ಕಾಂಗೈ ಶಾಸಕರು ವಿಧಾನ ಪರಿಷತ್ತಿನಲ್ಲಿ ದಿನವಿಡೀ ಧರಣಿ ನಡೆಸಿ ದಿನದ ಕಲಾಪ ಸ್ಥಗಿತಗೊಳಿಸಿದರೆ, ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಇದೇ ಕಾರಣಕ್ಕಾಗಿ ಧರಣಿ ನಡೆಸಿ ನಂತರ ಸಭಾತ್ಯಾಗ ಮಾಡಿದರು.

ವಿಧಾನ ಪರಿಷತ್ತಿನಲ್ಲಿ ಕಾಂಗೈ ಸದಸ್ಯರು ಸಿಬಿಐ ತನಿಖೆ ಮತ್ತು ಸಚಿವರ ರಾಜೀನಾಮೆಗೆ ಒತ್ತಾಯಿಸಿದರು. ಉಭಯ ಸದನಗಳಲ್ಲಿ ಬಿಜೆಪಿ ಶಾಸಕರು ಸದನ ಸಮಿತಿ ರಚನೆಗೆ ಆಗ್ರಹಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.