
ಟೆಂಡರಿಲ್ಲದೆ ಗುತ್ತಿಗೆ ನೀಡಿದರೆ ಜೈಲು: ಎಸ್.ಎಂ. ಕೃಷ್ಣ
ಮಂಡ್ಯ, ಫೆ. 5– ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಟೆಂಡರ್ ಕರೆಯದೆ ಅಧಿಕಾರಿಗಳು ಗುತ್ತಿಗೆ ದಾರರಿಗೆ ಕೆಲಸ ಕೊಟ್ಟರೆ ಜೈಲಿಗೆ ಹೋಗಬೇಕಾಗುತ್ತದೆ. ಹೀಗೆ ಮಾಡಿದ ಅಧಿಕಾರಿಯನ್ನು ಕಚೇರಿಯ ಬದಲಿಗೆ ಜೈಲಿನಲ್ಲಿ ನೋಡಬಹುದು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಇಂದು ಇಲ್ಲಿ ಎಚ್ಚರಿಕೆಯನ್ನು ನೀಡಿದರು.
ಸಾರ್ವಜನಿಕ ಟೆಂಡರ್‌ನಿಂದ ಭ್ರಷ್ಟಾಚಾರ ಬಹಿರಂಗವಾಗಿ ಯಾರು ಬೇಕಾದರೂ ಕೋರ್ಟ್‌ಗೆ ಹೋಗ ಬಹುದು. ಭ್ರಷ್ಟ ಅಧಿಕಾರಿಗಳು ನ್ಯಾಯಾಲಯಕ್ಕೆ ಸಮಜಾಯಿಷಿ ಕೊಡಬೇಕಾಗುತ್ತದೆ ಎಂದು ತಿಳಿಸಿದರು.
***
ಕೇಂದ್ರ ಸಂಪುಟಕ್ಕೆ ಪಿಎಂಕೆ ಸಚಿವರ ರಾಜೀನಾಮೆ
ನವದೆಹಲಿ, ಫೆ. 5– ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷಕ್ಕೆ ಸೇರಿದ ಇಬ್ಬರು ಸಚಿವರಾದ ಎನ್.ಟಿ. ಷಣ್ಮುಗಂ ಮತ್ತು ಪೊನ್ನುಸ್ವಾಮಿ ಇಂದು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆಯನ್ನು ನೀಡಿದರು.
ಷಣ್ಮುಗಂ ಅವರು ಕಲ್ಲಿದ್ದಲು ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿದ್ದರೆ, ಪೊನ್ನುಸ್ವಾಮಿ ಅವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.