ADVERTISEMENT

ಮಂಗಳವಾರ, 24–5–1994

​ಪ್ರಜಾವಾಣಿ ವಾರ್ತೆ
Published 23 ಮೇ 2019, 18:30 IST
Last Updated 23 ಮೇ 2019, 18:30 IST

ಕನ್ನಡ ಮಾಧ್ಯಮ ವಿರುದ್ಧ ಆಂಗ್ಲ ಶಾಲೆಗಳ ರಿಟ್

ಬೆಂಗಳೂರು, ಮೇ 23– ಈ ವರ್ಷದಿಂದ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಮಾತೃ ಭಾಷೆ ಅಥವಾ ಕನ್ನಡದಲ್ಲಿ ಶಿಕ್ಷಣ ನೀಡಬೇಕೆಂದು ಸರ್ಕಾರ ಹೊರಡಿಸಿರುವ ಆಜ್ಞೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಇಂದು ರಿಟ್ ಅರ್ಜಿ ಸಲ್ಲಿಸಲಾಗಿದೆ.

ಮನ್ನಣೆ ಪಡೆದ ಅನುದಾನ ರಹಿತ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಯುಕ್ತ ಆಡಳಿತ ಮಂಡಳಿಯ ಪರವಾಗಿ ಅದರ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಕೃಷ್ಣ ಅಯ್ಯರ್ ರಿಟ್ ಅರ್ಜಿ ಸಲ್ಲಿಸಿದ್ದು, ಸರ್ಕಾರ ಕಳೆದ ಏಪ್ರಿಲ್ 29ರಂದು ಹೊರಡಿಸಿರುವ ಆಜ್ಞೆಯನ್ನು 1989ನೇ ಜೂನ್ 18ಕ್ಕೆ ಮೊದಲುಪ್ರಾರಂಭವಾಗಿರುವ ಶಾಲೆಗಳಿಗೂಅನ್ವಯಿಸಿರುವುದರ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿದ್ದಾರೆ.

ADVERTISEMENT

ಕೈಗಾ ಯೋಜನೆ ಕಾಮಗಾರಿ ಪುನರಾರಂಭ

ಕಾರವಾರ, ಮೇ 23– ಕೈಗಾ ಯೋಜನೆಯ ನಿರ್ಮಾಣ ಹಂತದಲ್ಲಿರುವ ಮೊದಲ ರಿಯಾಕ್ಟರ್ ಗುಮ್ಮಟದ ಒಂದು ಬದಿಯ ಒಳಭಾಗ ಮೇ 13ರಂದು ಕುಸಿದಾಗ ಸ್ಥಗಿತಗೊಂಡ ಕಾಮಗಾರಿಯನ್ನುಯೋಜನಾ ನಿರ್ದೇಶಕ ಪರಮಹಂಸ ತಿವಾರಿಯವರ ಒತ್ತಾಯ ಮತ್ತು ಬೆದರಿಕೆಯ ಆದೇಶದ ಮೇರೆಗೆ ಕೆಲ ಕೈಗಾ ಸಿಬ್ಬಂದಿ ಮತ್ತು ಗುತ್ತಿಗೆದಾರರ ಕಾರ್ಮಿಕರು ಇಂದು ಸಾಯಂಕಾಲ 4 ಗಂಟೆಯಿಂದ ಕೆಲಸ ಪುನರಾರಂಭಿಸಿದರು ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.