ಕೂಪನ್‌ಹೇಗನ್, ಅ. 26– ಡೆನ್ಮಾರ್ಕ್‌ನ ಸೋಷಿಯಲಿಸ್ಟ್ ಪ್ರಧಾನಿ ಹಾನ್ಸ್ ಹೆಡ್ ಟಾಫ್ಟ್ ಇಂದು ತಮ್ಮ ಸರ್ಕಾರದ ರಾಜೀನಾಮೆಯನ್ನು ದೊರೆಗಳಿಗೆ ಸಲ್ಲಿಸಿದರು.
ಬೆಣ್ಣೆ ನಿಯಂತ್ರಣದ ಬಗ್ಗೆ ಸರ್ಕಾರಿ ಯೋಜನೆ ಪಾರ್ಲಿಮೆಂಟ್ ನಲ್ಲಿ ಪರಾಜಿತವಾದುದೇ ಈ ರಾಜೀನಾಮೆಗೆ ಕಾರಣ.
‘ಕೇಂದ್ರದಿಂದ ಸಕಾಲದಲ್ಲಿ ಆಹಾರ ಸರಬರಾಜಾಗಲಿ’
ಬೆಂಗಳೂರು, ಅ. 26– ಕೇಂದ್ರ ದಿಂದ ಬರಬೇಕಾದ ಆಹಾರ ಸಹಾಯ ಸಕಾಲಕ್ಕೆ ಒದಗಿದಲ್ಲಿ ಮೈಸೂರಿನ ಆಹಾರ ಪರಿಸ್ಥಿತಿ ಹತೋಟಿಯಲ್ಲಿ ಇರಲಿದೆ ಎಂದು ಮೈಸೂರಿನ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನುಡಿದರು.
ಮುಂದುವರಿದು, ಈ ಸಾಲಿನ ಆಹಾರ ಸಂಗ್ರಹಣೆ ಕಾರ್ಯ ಈಗಾಗಲೇ ಮುಗಿದಿರುವುದರಿಂದ
ಮುಂದಿನ ಕಟಾವಿನವರೆಗೆ ಅಂದಾಜುಗಳ ರೀತ್ಯಾ 29,000 ಟನ್ ಆಹಾರ ಕೊರತೆ ಎದುರಾಗಿದೆ ಎಂದು ತಿಳಿಸಿದರು.
ಭಾರತ ಸರ್ಕಾರ ನವೆಂಬರ್ ಮಾಹೆಗೆ 13,000 ಟನ್‌ಗಳನ್ನು ಮೈಸೂರಿಗೆ ಕೊಡುವುದಾಗಿಯೂ, ಡಿಸೆಂಬರ್‌ನಲ್ಲೂ ಕೇಂದ್ರ ಆಹಾರ ಒದಗಿಸುವ ನಿರೀಕ್ಷೆ ಇದೆ ಎಂದು ಕೆ.ಸಿ. ರೆಡ್ಡಿ ನುಡಿದರು.
ಟಿಬೆಟ್ ಸರ್ಕಾರಕ್ಕೆ ಇನ್ನೂ ಸುದ್ದಿ ದೊರೆತಿಲ್ಲ
ಕಾಲಿಂಪೊಂಗ್, ಅ. 26– ಚೀಣೀ ಪಡೆಗಳು ಟಿಬೆಟ್ ಗಡಿ ಪ್ರವೇಶಿಸಿರುವ ಬಗ್ಗೆ ಪೂರ್ವ ಗಡಿಯಿಂದ ತಮಗೆ ಯಾವ ಸುದ್ದಿಯೂ ಬಂದಿಲ್ಲವೆಂದು ಟಿಬೆಟ್ ಸರ್ಕಾರಿ ವೃತ್ತಗಳವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.