
ಪ್ರಜಾವಾಣಿ ವಾರ್ತೆವಾಷಿಂಗ್ಟನ್, ನ. 30– ಕೊರಿಯದಲ್ಲಿ ಅಣುಬಾಂಬ್ ಪ್ರಯೋಗದ ಪ್ರಶ್ನೆಯು ಸದಾ ತಮ್ಮ ತೀವ್ರ ಪರಿಶೀಲನೆಯಲ್ಲಿತ್ತೆಂದು ಅಧ್ಯಕ್ಷ ಟ್ರೂಮನರು ಇಂದು ಹೇಳಿದರು.
ಇದು ಪ್ರಯೋಗವಾಗುವುದೇ ಎಂಬುದು ಯುದ್ಧಕ್ಷೇತ್ರದಲ್ಲಿರುವ ಅಮೆರಿಕಾ ಸೇನಾ ನಾಯಕರಿಗೆ ಸೇರಿದ್ದೆಂದೂ, ಆದರೆ ಅದನ್ನು ಪ್ರಯೋಗಿಕಬೇಕಾಗಿ ಬಂದಿರಬಹುದೆಂಬುದು ತಮ್ಮ ವೈಯಕ್ತಿಕ ಆಸೆಯೆಂದೂ ಟ್ರೂಮನ್ ತಿಳಿಸಿದರು.
ಕಿಕ್ಕಿರಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ಅಧ್ಯಕ್ಷ ಟ್ರೂಮನ್ನರು ಅಣುಬಾಂಬನ್ನ ವಿಶ್ವಸಂಸ್ಥೆಯ ಅನುಮತಿಯಿಲ್ಲದೆಯೇ ಪ್ರಯೋಗಿಸಬಹುದೆಂದೂ ಅದು ಅಮೆರಿಕಾ ಅನೇಕ ಮಿಲಿಟರಿ ಶತ್ರುಗಳಲ್ಲೊಂದೆಂದೂ, ತನ್ನ ಆಯುಧಗಳನ್ನು ಉಪಯೋಗಿಸಲು ಅಮೆರಿಕಾಕ್ಕೆ ಸ್ವಾತಂತ್ರ್ಯವಿದೆಯೆಂದೂ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.