ADVERTISEMENT

75 ವರ್ಷಗಳ ಹಿಂದೆ: ಸುಸ್ಥಿರ ಆಮದು ನೀತಿ ಶೀಘ್ರ ಅನ್ವಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 23:30 IST
Last Updated 23 ಅಕ್ಟೋಬರ್ 2025, 23:30 IST
   

ಸುಸ್ಥಿರ ಆಮದು ನೀತಿ ಶೀಘ್ರ ಅನ್ವಯ ಅಗತ್ಯ

ನವದೆಹಲಿ, ಅ.23– ಸುಸ್ಥಾಯಿಯಾದ ಆಮದು ನೀತಿ ಅಂಗೀಕರಿಸಬೇಕಲ್ಲದೆ ಅದನ್ನು ಶೀಘ್ರವಾಗಿ, ದಕ್ಷತೆಯಿಂದ ಜಾರಿಗೆ ತರಬೇಕು ಎಂಬುದಾಗಿ ಆಮದು ಹತೋಟಿ ಪರಿಶೀಲನಾ ಸಮಿತಿ, ಭಾರತದ ಆಮದು ಹತೋಟಿಯನ್ನು ಕುರಿತು ಇದೇ ತಾನೆ ಭಾರತ ಸರ್ಕಾರಕ್ಕೆ ಒಪ್ಪಿಸಿರುವ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಆಮದು ಹತೋಟಿ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸುವ ಮಾರ್ಗಗಳನ್ನು ಶೋಧಿಸಿ ವರದಿ ಮಾಡುವ ಸಲುವಾಗಿ ಈ ಸಮಿತಿಯನ್ನು ಕಳೆದ ಜುಲೈ ತಿಂಗಳಲ್ಲಿ ನೇಮಿಸಿತ್ತು.

ವಿಶ್ವಸಂಸ್ಥೆಗೆ ಪಕ್ಷಪಾತ ನೀತಿ ಸರ್ವಥಾ ಸಲ್ಲದು

ನವದೆಹಲಿ, ಅ.23– ‘ವಿಶ್ವಸಂಸ್ಥೆಯ ಭವಿಷ್ಯದ ಸ್ಥಾನಮಾನಗಳು ಯುದ್ಧ ಅಥವಾ ಶಾಂತಿ ಮತ್ತು ವಿಶ್ವದ ಭವಿಷ್ಯದ ಸಮಸ್ಯೆಗಳನ್ನು ಅವಲಂಬಿಸಿದೆ’ ಎಂದು ಭಾರತದ ಪ್ರಧಾನಿ ಪಂಡಿತ ನೆಹರೂ, ಇಂದು ವಿಶ್ವಸಂಸ್ಥೆ ದಿನಾಚರಣೆ ಸಂದರ್ಭದಲ್ಲಿ ಕೊಟ್ಟ ಸಂದೇಶದಲ್ಲಿ ಘೋಷಿಸಿದರು.

ADVERTISEMENT

‘ವಿಶ್ವವು ಯುದ್ಧದತ್ತ ಸಾಗದಂತೆ ನಾವು ಶಕ್ತಿಮೀರಿ ಶ್ರಮಿಸಬೇಕಾದ ಅಗತ್ಯ ಹೆಚ್ಚಾಗಿದೆ’ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.