ADVERTISEMENT

75 ವರ್ಷಗಳ ಹಿಂದೆ | ಸಿಂಧ್ ಹೈದ್ರಾಬಾದ್ ಜನರ ಮೇಲೆ ಗುಂಡು: 10 ಮರಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
   

ಕರಾಚಿ, ಅ. 24– ಸೋಮವಾರ ರಾತ್ರಿ ಸಿಂಧ್ ಹೈದರಾಬಾದಿನಲ್ಲಿ ಉದ್ರೇಕಗೊಂಡ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಹತ್ತು ಮಂದಿ ಮೃತರಾದರು. 42 ಮಂದಿಗೆ ಗಾಯಗಳಾಗಿವೆ ಎಂದು ಕರಾಚಿಗೆ ಬಂದಿರುವ ಸುದ್ದಿಯಿಂದ ಗೊತ್ತಾಗಿದೆ.

ಮುಸಲ್ಮಾನರ ಎರಡು ಪಂಗಡಗಳಲ್ಲಿ ತೊಂದರೆಯನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದರೆಂದು ಬೆಳಗ್ಗೆ ಮೂವರ ದಸ್ತಗಿರಿಯಾಗಿತ್ತೆಂದೂ, ಮೂವರನ್ನೂ ಬಿಡುಗಡೆ ಮಾಡಬೇಕೆಂದು ಹೈದರಾಬಾದಿನ (ಸಿಂಧ್) ನಗರ ಪೊಲೀಸ್ ಠಾಣೆ ಬಳಿ 20 ಸಾವಿರ ಜನರ ಗುಂಪು ಸೇರಿ ಉದ್ರೇಕಗೊಂಡಿದ್ದರಿಂದ ಗುಂಡು ಹಾರಿಸಬೇಕಾಯ್ತೆಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT